ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಲವಿದ್ಯುತ್ ಯೋಜನೆ ಸುತ್ತಮುತ್ತ ಚಿರತೆ ಹಾವಳಿ: ಭಯದಲ್ಲಿ ಕಾರ್ಮಿಕರು

Rashmi Kasaragodu
Updated On : 25 Dec 2013, 1:49 am

ಸಕಲೇಶಪುರ: ಪಶ್ಚಿಮಘಟ್ಟದ ತಪ್ಪಲಿನಲ್ಲಿ ಚಿರತೆಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ತಾಲೂಕಿನಲ್ಲಿರುವ ಕಿರು ಜಲವಿದ್ಯುತ್ ಸ್ಥಾವರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಜೀವಭಯ ಆವರಿಸಿದೆ. ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ತಪ್ಪಲಿನ ಕೆಂಪುಹೊಳೆಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಐಪಿಸಿಎಲ್ ಹಾಗೂ ನಾಗಾರ್ಜುನ ಜಲವಿದ್ಯುತ್ ಯೋಜನೆಗಳ ಸುತ್ತಮುತ್ತ ಚಿರತೆಗಳ ಹಾವಳಿ ಹೆಚ್ಚಾಗಿದೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಈ ಜಲವಿದ್ಯುತ್ ಯೋಜನೆಯ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವ 3 ಚಿರತೆಗಳು ಈಗಾಗಲೇ ಯೋಜನೆಯ ನೌಕರರು ಸಾಕಿದ್ದ ಆರು ನಾಯಿ ಹಾಗೂ ಎರಡು ಬೆಕ್ಕುಗಳನ್ನು ತಿಂದು ಹಾಕಿವೆ.  ಕಳೆದ ಎರಡು ವರ್ಷದ ಅವಧಿಯಲ್ಲಿ ಈ ಅರಣ್ಯಕ್ಕೆ 5 ಚಿರತೆಗಳನ್ನು ರಾಜ್ಯದ ನಾನಾ ಬಾಗದಿಂದ ಹಿಡಿದು ತಂದು ಬಿಡಲಾಗಿರುವುದೆ ಚಿರತೆ ಹಾವಳಿ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಕತ್ತಲು ಆವರಿಸುವ ವೇಳೆಗೆ ಪ್ರತ್ಯೇಕ್ಷವಾಗುವ ಈ ಚಿರತೆಗಳಿಂದಾಗಿ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುವ 60 ಕಾರ್ಮಿಕರು ಜೀವಭಯ ಎದುರಿಸುತ್ತಿದ್ದಾರೆ. ಇದನ್ನು ಆಡಳಿತ ಮಂಡಳಿಗೆ ತಿಳಿಸಿದ್ದರಿಂದ ಹಗಲುವೇಳೆ ಪಟಾಕಿಗಳನ್ನು ಸಿಡಿಸಿ ಚಿರತೆಗಳು ಇತ್ತ ಬಾರದಂತೆ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೆ ಚಿರತೆ ವಾಸಿಸುವ ಪ್ರದೇಶದಲ್ಲಿ ನೀವು ಕೆಲಸ ಮಾಡುತ್ತಿದ್ದಿರಾ, ಚಿರತೆಗಳನ್ನು ಇಲ್ಲಿಂದ ಎಲ್ಲಿಗೆ ಸಾಗಿಸುವುದು ಎಂದು ಪ್ರಶ್ನಿಸುತ್ತಾರೆ. ವಿದ್ಯುತ್ ಬೇಲಿ ನಿರ್ಮಿಸುವಂತೆ ಒತ್ತಡ ಹಾಕುತ್ತಿದ್ದರೂ ಮುಂದಾಗುತ್ತಿಲ್ಲವೆಂದು ದೂರಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement