ಪೌಷ್ಟಿಕಾಂಶ ಬಗ್ಗೆ ತಿಳಿವಳಿಕೆ ಕಾರ್ಯಕ್ರಮ
ಬೇಲೂರು: ಇಂದಿನ ದಿನ ಮಾನದ ಆಹಾರ ಪದ್ದತಿಯಿಂದ ತಾಯಂದಿರ ಆರೋಗ್ಯದಲ್ಲಿ ಏರು ಪೇರು ಉಂಟಾಗಿ ಹುಟ್ಟುವ ಮಕ್ಕಳಲ್ಲಿ ಪರಿಣಾಮ ಬೀರುತ್ತದೆ ಎಂದು ಅಂಗನಾಡಿ ಕೇಂದ್ರ ಕಾರ್ಯಕರ್ತೆ ನಾಗಮ್ಮ ತಿಳಿಸಿದರು.
ಪಟ್ಟಣದ ಗಾಣಿಗರ ಬೀದಿಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ತಾಯಂದಿರ ಆರೋಗ್ಯ ಹಾಗೂ ಆಹಾರ ಪೌಷ್ಟಿಕಾಂಶದ ಬಗ್ಗೆ ತಿಳಿವಳಿಕೆ ನೀಡಿದ ಅವರು ಸ್ಥಳೀಯವಾಗಿ ದೊರೆಯುವ ತರಕಾರಿಗಳು ಮತ್ತು ಧಾನ್ಯಗಳನ್ನು ಹೆಚ್ಚು-ಹೆಚ್ಚು ಬಳಕೆ ಮಾಡುವ ದಿಸೆಯಲ್ಲಿ ಬಾಣಂತಿಯರು ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮಕ್ಕಳಿಗೆ ಸದ್ಯ ಹಲವು ಹತ್ತು ಬಗ್ಗೆಯ ಪೌಷ್ಟಿಕಾಂಶಗಳನ್ನು ನೀಡಲಾಗುತ್ತದೆ ಎಂದರು. ಅಂಗನವಾಡಿ ಕೇಂದ್ರ ವ್ಯಾಪ್ತಿಯ ತಾಯಂದಿರು ಮತ್ತು ಮಕ್ಕಳು ಇದ್ದರು.