ಶನೇಶ್ವರಸ್ವಾಮಿ ದೇಗುಲ ಅಭಿವೃದ್ಧಿಗೆ ಲಕ್ಷ ರು. ಅನುದಾನ
ಸಕಲೇಶಪುರ:ಪಟ್ಟಣದ ಶನೇಶ್ವರಸ್ವಾಮಿ ದೇವಸ್ಥಾನದ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಲಕ್ಷ ರು. ಅನುದಾನ ನೀಡಲಾಯಿತು. ಪಟ್ಟಣದ ಹಳೇಸಂತವೇರಿ ಬಡಾವಣೆಯಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿದ ಗ್ರಾಮಾಭಿವೃದ್ಧಿ ಸಂಸ್ಥೆ ಅಧಿಕಾರಿ ಸುನಿತಾ ಪ್ರಭು ದೇವಸ್ಥಾನ ಮಂಡಳಿ ಸದಸ್ಯ ಎಸ್.ಡಿ ಆದರ್ಶಗೆ ಒಂದು ಲಕ್ಷ ಚೆಕ್ ನೀಡಿದರು.
ಅಲ್ಲದೆ ದೇವಸ್ಥಾನ ಅಭಿವೃದ್ಧಿಗೆ ಬೇಕಿರುವ ಸಹಾಯವನ್ನು ಧರ್ಮಸ್ಥಳ ಕ್ಷೇತ್ರ ನೀಡಲು ಸಿದ್ದವಿದೆ ಎಂದರು. ಸಂಘದ ಜಗದೀಶ್, ದೇವಸ್ಥಾನ ಸಮಿತಿ ಬಾಲಸುಬ್ರಹ್ಮಣ್ಯ, ಈಶ್ವರ್, ನಾಗೇಶ್, ಯೋಗೇಶ್, ಆನಂದ್ ಇತರರು ಇದ್ದರು.