ಬೆಂಕಿ: ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ
ಹಾಸನ: ಆಕಸ್ಮಿಕವಾಗಿ ಗೋಡೌನ್ವೊಂದಕ್ಕೆ ಬೆಂಕಿ ತಗಲಿ ಅಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬುಧವಾರ ನಡೆದಿದೆ. ನಗರದ ಸುಭಾಸ್ ಚೌಕದಲ್ಲಿರುವ ತ್ರಿಮೂರ್ತಿ ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲೀಕ ಮಹೇಶ್ ಪೂಜಾರಿ ಎಂಬುವರು ರಿಪೇರಿಯಾದ ಟಿವಿ, ಡಿವಿಡಿ, ಮಿಕ್ಸಿ ಸೇರಿದಂತೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತಮ್ಮ ಗೋಡೌನ್ನಲ್ಲಿ ಇಟ್ಟಿದ್ದು, ಅಕಸ್ಮಿಕ ಬೆಂಕಿ ತಗಲಿದ ಕಾರಣ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದರಿಂದ ಲಕ್ಷಾಂತರ ರು. ನಷ್ಟು ಸಂಭವಿಸಿದೆ.