ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾಂತಿದೂತನ ಸಂಭ್ರಮದ ಹಬ್ಬ

Mainashree
Updated On : 25 Dec 2013, 9:24 am

ಕನ್ನಡಪ್ರಭ ವಾತೆ೤ ಹಾಸನ೤ ಡಿ. 25
ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ ಏಸುಕ್ರಿಸ್ತನ ಹುಟ್ಟುಹಬ್ಬವನ್ನು ಬಣ್ಣ ಬಣ್ಣದ ಕೇಕ್, ವಿಧವಿಧವಾದ ಚಾಕೋಲೇಟ್, ಮೇಣದ ಬತ್ತಿಗಳ ಬೆಳಕಿನಿಂದ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಆಲೂರು, ಅರಕಲಗೂಡು, ಅರಸೀಕೆರೆ, ಹೊಳೆನರಸೀಪುರ, ಚನ್ನರಾಯಪಟ್ಟಣ, ಬೇಲೂರು, ಸಕಲೇಶಪುರ ತಾಲೂಕುಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಚರ್ಚ್ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ಮೂಲಕ ಸಂಭ್ರಮದಿಂದ ಆಚರಿಸಿ, ಹಬ್ಬದ ಶುಭಾಶಯ ಒಬ್ಬರನ್ನೊಬ್ಬರು ವಿನಿಯೋಗಿಸಿಕೊಂಡರು.
ನಗರದ ಆರ್.ಸಿ.ರಸ್ತೆಯ ಸಿಎಸ್ಐ ವೆಸ್ಲಿ ಚರ್ಚ್ ಹಾಗೂ ಎನ್.ಆರ್.ವೃತ್ತದ ಹತ್ತಿರ ಇರುವ ಸಂತ ಫಿಲೋಮಿನ ಚರ್ಚ್ಗಳಲ್ಲಿ ಕ್ರೃಸ್ತರು ಮೇಣದ ಬತ್ತಿ ಹಚ್ಚಿ, ಬೆಳಕಿನಿಂದ ಬಹಳ ಅದ್ದೂರಿ ಮತ್ತು ಸಡಗರದಿಂದ ಸಂಬಂಧಿಕರು ಸೇಹಿತರು, ಕುಟುಂಬದವರು ಹಾಗೂ ಪ್ರತಿಯೊಬ್ಬರೂ ಪರಿಚಯಿಸಿಕೊಂಡು, ಹುಟ್ಟು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಸಾಂತಾಕ್ಲಾಸ್ ನೆನಪು:   ಕ್ರಿಸ್ಮಸ್ ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದು ಬಾಲಏಸುವಿನ ವಿಗ್ರಹ, ಸಾಂತಕ್ಲಾಸ್, ಬಣ್ಣ ಬಣ್ಣದ ಕೇಕ್, ನಾನಾ ರೀತಿಯ ಬಣ್ಣದ ಮೇಣದ ಬತ್ತಿ ಮತ್ತು ಬಣ್ಣದ ಬಲೂನ್ಗಳು, ಮಿನುಗುವ ನಕ್ಷತ್ರಗಳು, ಕ್ರಿಸ್ಮಸ್ ಗಿಡ ಮತ್ತು ಗ್ರೀಟಿಂಗ್ಸ್ನೊಂದಿಗೆ ಎಲ್ಲರೂ ಪ್ರೀತಿ ವಿಶ್ವಾಸದೊಂದಿಗೆ, ಮೇಲು ಕೀಳು, ಭೇದಭಾವ ಎಂಬ ಭಾವನೆ ಇಲ್ಲದೆ ಏಸುವಿನ ಜನ್ಮದಿನದ ಹಬ್ಬವನ್ನು ಆಚರಿಸಲಾಗುತ್ತದೆ. ಗ್ರೀಟಿಂಗ್ಸ್ನಲ್ಲಿ ಬಾಲ ಏಸುವಿನ  ಬಾಲ್ಯದ ಬದುಕು ಮತ್ತು ಜನರಿಗಾಗಿ ಮಾಡಿದ ಸೇವೆಗಳ ಬಗ್ಗೆ ಬರೆದು ಸೇಹಿತರಿಗೆ, ಸಂಬಂಧಿಕರಿಗೆ ನೀಡಿ ಹಬ್ಬದ ಸವಿ ಸಂಭ್ರಮಿಸಿದರು.
ಗಂಟೆಗೂ ಹೆಚ್ಚು ಸಮಯ ಪ್ರಾರ್ಥನೆ:  ಕ್ರೈಸ್ತ ಬಾಂಧವರೆಲ್ಲರೂ ಸಡಗರದಿಂದ ಬೃಹತ್ ಕೇಕ್ ಕತ್ತರಿಸಿ ಮತ್ತು ಚಾಕೋಲೇಟ್ಗಳನ್ನು ಎಲ್ಲರಿಗೂ ನೀಡಿ ಜೀವನದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಏಸು ಹುಟ್ಟಿದ್ದು ಡಿ.24ರ ಮಧ್ಯರಾತ್ರಿ 12 ಗಂಟೆಗೆ. ಚರ್ಚ್ಗಳಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಪ್ರಾರ್ಥನೆ ಮಾಡುತ್ತಾರೆ. ಸಾಮಾನ್ಯ ದಿನಗಳಲ್ಲಿ ಅರ್ಧಗಂಟೆ ಕಾಲ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಹಬ್ಬದಂದು ಮಾತ್ರ ಹೆಚ್ಚು ಕಾಲ ಪ್ರಾರ್ಥನೆ ಸಲ್ಲಿಸುತ್ತಿದಾರೆ.
ಜಗತ್ತಿನಲ್ಲಿ ಅಶಾಂತಿ, ದಬ್ಬಾಳಿಕೆ, ಶೋಷಣೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಏಸುಕ್ರಿಸ್ತ ಜನಿಸಿದ. ಅವನು ಜನಸಿದ್ದೆ ಜಗತ್ತಿಗೆ ಶಾಂತಿ, ನೆಮ್ಮದಿ, ಪ್ರೀತಿ ವಿಶ್ವಾಸವನ್ನು ನೀಡಲು ಬಂದವರೇ ಏಸು. ಕಡು ಬಡತನದಲ್ಲಿ ಪವಿತ್ರತೆಯಿಂದ ಗರ್ಭ ಧರಿಸಿದ ತಾಯಿ ಮರಿಯಮ್ಮ ಮತ್ತು ಸಾಕುತಂದೆ ಜೋಸೇಫ್ರ್ ಮಗನಾಗಿ ಜನಿಸಿ ಜನರ ಕಷ್ಟಗಳಿಗೆ ಸ್ಪಂದಿಸಿದ ಗುರು. ಸಾಂಕೇತಿಕವಾಗಿ ಏಸುವನ್ನು ಮೇಣದ ಬೆಳಕಿನಲ್ಲಿ ಜನರು ಕಾಣುತ್ತಾರೆ. ಏಸು ಬೆಳಕಿನಿಂದ ಜನಸಾಮಾನ್ಯರ ಕಷ್ಟಗಳನ್ನು ನೀಗಿಸುತ್ತಾನೆ ಎಂಬ ಸಂಪ್ರದಾಯವಿದೆ.
ಕ್ರಿಸಮಸ್ ಹಬ್ಬಕ್ಕೆ ಮೆರುಗೆಂದರೆ ಅದು ಕೇಕ್ ಹಾಗೂ ಮಿನುಗುವ ನಕ್ಷತ್ರಗಳು. ಏಸು ಎಲ್ಲಿ ಇರುತ್ತಾರೋ ಅಲ್ಲಿ ಮಿನುಗುವ ನಕ್ಷತ್ರವನ್ನು ತೂಗು ಬಿಡಲಾಗುತ್ತದೆ. ಕ್ರಿಸ್ಮಸ್ಗೂ ಮೊದಲೆ ಸಾಂತಕ್ಲಾಸ್ ಬಂದು  ಮಕ್ಕಳಿಗೆ ಸಿಹಿ, ಚಾಕೋಲೇಟ್ ವಿತರಿಸುತ್ತಾನೆ. ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಕ್ರಿಸ್ಮಸ್ಗೆ ಸಂಬಂಧಿಸಿದಂತೆ ಪ್ರಾರ್ಥನೆ ಮತ್ತು ನೃತ್ಯಗಳನ್ನು ಹೇಳಿಕೊಡುತ್ತಾರೆ. ಒಟ್ಟಾರೆ ಮಕ್ಕಳಾದಿಯಾಗಿ ಎಲ್ಲರೂ ಸೇರಿ ಜಿಲ್ಲೆಯಲ್ಲಿ ಸಡಗರದಿಂದ ಕ್ರಿಸ್ಮಸ್ ಆಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement