ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸಂಸ್ಕೃತಿ ಬಲಿಷ್ಠವಾಗಿರುವ ತನಕ ವಿಶ್ವದಲ್ಲಿ ಶಾಂತಿ'

Mainashree
Updated On : 25 Dec 2013, 9:23 am

ಕ.ಪ್ರ.ವಾರ್ತೆ  ಜಾವಗಲ್  ಡಿ. 25
ಭಾರತೀಯ ಸಂಸ್ಕೃತಿಯು ಬಲಿಷ್ಠವಾಗಿರುವವರೆಗೂ ವಿಶ್ವದಲ್ಲಿ ಶಾಂತಿ ನೆಲೆಸಿರುತ್ತದೆ ಎಂದು ಜಗದ್ಗುರು ಶಂಕರಾಚಾರ್ಯ ಹಂಪಿ ವಿರೂಪಾಕ್ಷ ಮಹಾಸಂಸ್ಥಾನದ ವಿದ್ಯಾರಣ್ಯ ಭಾರತಿ ಸ್ವಾಮೀಜಿ  ಅಭಿಪ್ರಾಯಪಟ್ಟರು.  ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವಾಲಯ ವೀಕ್ಷಿಸಿ ದೇಗುಲದ ಸಂರಕ್ಷಣ ಕಾರ್ಯದ ಬಗ್ಗೆ ಸಂತಹ ವ್ಯಕ್ತಪಡಿಸಿದರು.
ಪಾಶ್ಚಿಮಾತ್ಯರು ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಗೌರವ ಮನೋಭಾವನೆ ಹೊಂದಿ, ಸಂಶೋಧನೆ ಮಾಡಿ ಅದನ್ನು ಪಾಲಿಸುತ್ತಿದ್ದಾರೆ. ಇಂದು ಸಮಾಜದ ವಾತಾವರಣ ಕಲುಶಿತಗೊಳ್ಳುತ್ತಿದೆ, ಯಜ್ಞ ಯಾಗಾದಿಗಳು ಮಾಯವಾಗುತ್ತಿದೆ. ಭಾರತೀಯರಾದ ನಾವು ಧರ್ಮ, ಸಂಪ್ರದಾಯ, ಆಚಾರ, ಶ್ರದ್ಧೆ, ಸತ್ಕಾರ್ಯ ಮುಂತಾದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಭಗವಂತನನ್ನು ಇಂದು ವ್ಯಾಪಾರ ರೂಪದಲ್ಲಿ ಕಾಣುತ್ತಿದ್ದೇವೆ. ಶ್ರದ್ಧೆ, ಭಕ್ತಿಯಿಂದ ನಾಮಸ್ಮರಣೆ ಮಾಡುವುದು ಭಗವಂತನಿಗೆ ಹೆಚ್ಚು ಪ್ರಿಯವಾದುದು ಎಂದ ಶ್ರೀಗಳು, ತಂದೆ ತಾಯಿ ಮಕ್ಕಳಲ್ಲಿ ಭಾರತಿಯ ಸಂಸ್ಕೃತಿ, ಪರಂಪರೆಯ ಬಗ್ಗೆ ಅರಿವುಮೂಡಿಸಬೇಕು. ಜತೆಗೆ ಸಂಸ್ಕಾರ, ಜ್ಞಾನ ನೀಡುವುದರಲ್ಲಿ ಮಹತ್ತರ ಜವಾಬ್ದಾರಿ ಇದೆ ಎಂದರು.
ಅಂಕಲ್, ಆಂಟಿ, ಸಾರಿ, ಸಂಸ್ಕೃತಿ ತಾಂಡವವಾಡುತ್ತಿದ್ದು, ಅಹಂಕಾರ ಬಿಟ್ಟು ಸಮಯಕ್ಕೆ ಮಹತ್ವ ನೀಡಬೇಕು. ನಿತ್ಯ ಜೀವನದಲ್ಲಿ ಆಚಾರ ವಿಚಾರ, ಆಧ್ಯಾತ್ಮಿಕ, ಸಂಪ್ರದಾಯ, ಭಾಷೆಗೆ, ಒತ್ತು ನೀಡಬೇಕೆಂದ ಅವರು,   ಸನಾತನ ಧರ್ಮದ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದರು.
ದೇವಾಲಯ ಮುಂಭಾಗದಲ್ಲಿ ಬ್ರಾಹ್ಮಣ ಸಮಾಜ ಅಧ್ಯಕ್ಷ ರಮೇಶ್ ಜೋಯಿಸ್ ದಂಪತಿ ಮತ್ತು ಭಕ್ತರು ಸ್ವಾಮೀಜಿಯವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಧೂಳುಪಾದ ನೆರವೇರಿಸಿದರು. ದೇವಾಲಯ ಸಂಚಾಲಕ ಜೆ.ಆರ್.ವಸಂತ್ಕುಮಾರ್, ನಾರಾಯಣಸ್ವಾಮಿ ಮತ್ತು ಭಕ್ತವರ್ಗದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement