ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಾಸನ ಮೂಲದ ಮೊಬೈಲ್ ಕಳ್ಳನ ಬಂಧನ

Mainashree
Updated On : 25 Dec 2013, 9:58 am

ಮೈಸೂರು: ರೋಲಿಂಗ್ ಶೆಟರ್ ಮುರಿದು ಕಳವು ಮಾಡುತ್ತಿದ್ದವನನ್ನು ವಿಜಯನಗರ ಪೊಲೀಸರು ಬಂಧಿಸಿ, 40 ಸಾವಿರ ಮೌಲ್ಯದ ವಿವಿಧ ಕಂಪನಿಯ 6 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
 ಹಾಸನ ಜಿಲ್ಲೆ ಕತ್ರಿಗಟ್ಟ ಗ್ರಾಮದ ಪಳನಿಗೌಡ ಎಂಬವರ ಪುತ್ರ ವಿಜಯ್‌ಕುಮಾರ್ ಅ. ವಿಜಿ ಬಂಧಿತ.
 ಎರಡು ತಿಂಗಳ ಹಿಂದೆ ವಿಜಯನಗರ ಠಾಣೆ ವ್ಯಾಪ್ತಿಯ ಜನನಿ ಮೊಬೈಲ್ ಅಂಗಡಿಯ ರೋಲಿಂಗ್ ಶಟರ್ ಮುರಿದು 1.36 ಲಕ್ಷ ಮೌಲ್ಯದ ಒಟ್ಟು 42 ಮೊಬೈಲ್ ಪೋನ್‌ಗಳನ್ನು ಕಳವು ಮಾಡಿದ್ದರು.
 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಪೆರುಮಾಳ್ ಎಂಬಾತನನ್ನು ಪೊಲೀಸರು ಬಂಧಿಸಿ, ಆತನಿಂದ 20 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದರು.
 ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ಆರೋಪಿ ವಿಜಯಕ್‌ಕುಮಾರ್‌ನನ್ನು ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಜೋಳದ ಮಂಡಿ ಬಳಿ ಹಿಡಿದು, ವಿವಿಧ ಕಂಪನಿಯ ಒಟ್ಟು 6 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement