ಇಂದು ಟಿವಿಎಸ್ ಜುಪಿಟರ್ ಲೋಕಾರ್ಪಣೆ
ಹಾಸನ: ಟಿವಿಎಸ್ ಕಂಪನಿಯ ಅಧಿಕೃತ ಮಾರಾಟಗಾರ ಶ್ರೀಕೃಷ್ಣ ಮೋಟಾರ್ಸ್ ವತಿಯಿಂದ ಟಿವಿಎಸ್ ಕಂಪನಿಯ ನೂತನ ವಾಹನ ಟಿವಿಎಸ್ ಜುಪಿಟರ್ ಲೋಕಾರ್ಪಣೆ ಕಾರ್ಯಕ್ರಮ ಡಿ.27 ರಂದು ಸಂಜೆ 5.30 ಕ್ಕೆ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಶಾಸಕ ಎಚ್.ಎಸ್. ಪ್ರಕಾಶ್ ನೂತನ ವಾಹನವನ್ನು ಲೋಕಾರ್ಪಣೆ ಮಾಡುವರು. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಸಮಾರಂಭ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷ ಶ್ರೀವಿದ್ಯಾ ಆನಂದ್, ಉಪಾಧ್ಯಕ್ಷ ಇರ್ಷಾದ್ಪಾಷಾ ಕೆಸಿಪಿ ಗ್ರೂಪ್ ಮಾಲೀಕ ಕೆ.ಸಿ. ಪುಟ್ಟಸ್ವಾಮಿಗೌಡ ಹಾಗೂ ಕಂಪನಿಯ ಟೆರಿಟರಿ ವ್ಯವಸ್ಥಾಪಕ ಜಿ. ಮನೋಹರ್ ಭಾಗವಹಿಸುವರು. ವಾಹನ ಲೋಕಾರ್ಪಣೆ ನಂತರ ಖ್ಯಾತ ಕಲಾವಿದೆ ಇಂದುಶ್ರೀ ಮತ್ತು ತಂಡದವರು ಮಾತನಾಡುವ ಬೊಂಬೆ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಡುವರು.