ಒತ್ತಡದಲ್ಲೂ ಆರೋಗ್ಯದ ಬಗ್ಗೆ ಗಮನ ಇರಲಿ: ಸಿಪಿಐ ಗಣೇಶ್
ಕ.ಪ್ರ.ವಾರ್ತೆ ಬೇಲೂರು ಡಿ.26
ಸದಾ ಒತ್ತಡದಲ್ಲಿರುವ ಪೊಲೀಸ್ ಸಿಬ್ಬಂದಿ ತಮ್ಮ ಆರೋಗ್ಯ ಬಗ್ಗೆ ಗಮನಹರಿಸದ ಕಾರಣ ಅನೇಕ ಅವಘಡಗಳು ನಡೆಯುತ್ತವೆ. ಈ ದಿಸೆಯಲ್ಲಿ ಆರೋಗ್ಯದ ಬಗ್ಗೆ ಗಮನವಿರಲಿ ಎಂದು ಬೇಲೂರು ವೃತ್ತ ನಿರೀಕ್ಷಕ ಗಣೇಶ ತಿಳಿಸಿದರು.
ಪುರಸಭೆ ಅವರಣದಲ್ಲಿ ಬೇಲೂರು ಲಯನ್ಸ್ ಮತ್ತು ಮೈಕ್ರೋಲ್ಯಾಬ್ ಬೆಂಗಳೂರು, ಶಿವನ್ ಪಾಲಿಕ್ಲಿನಿಕ್ ಸಂಯುಕ್ತ ಆಶ್ರಯದಲ್ಲಿ ನಡೆದ ಪುರಸಭಾ ನೌಕರರು ಮತ್ತು ಪೊಲೀಸ್ ಸಿಬ್ಬಂದಿಗೆ ಉಚಿತ ಸಕ್ಕರೆ ಕಾಯಿಲೆ ಪರೀಕ್ಷೆ, ರಕ್ತದ ಒತ್ತಡ, ರಕ್ತದ ಗುಂಪು ಪತ್ತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರ ಪ್ರಾಣ ಆಸ್ತಿ ಹಾಗೂ ಹಲವು ಹತ್ತು ರಕ್ಷಣೆ ಮಾಡುವುದು ಪೊಲೀಸ್ ಸಿಬ್ಬಂದಿ ಆದ್ಯ ಕರ್ತವ್ಯವಾಗಿದ್ದು, ತನ್ನ ಆರೋಗ್ಯದ ಮತ್ತು ಕುಟುಂಬದ ಬಗ್ಗೆ ಗಮನ ಹರಿಸದೆ ಅಧುನಿಕ ರೋಗಗಳು ಬರುತ್ತವೆ ಎಂದ ತಿಳಿಸಿದ ಅವರು ಬೇಲೂರು ಲಯನ್ಸ್ ಇಂತಹ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಲಯನ್ಸ್ ಅಧ್ಯಕ್ಷ ಪೂವಯ್ಯ ಮಾತನಾಡಿದರು. ಪುರಸಭೆ ಮುಖ್ಯ ಎಂಜಿನಿಯರ್ ಶಿವಪ್ರಸಾದ್, ಸದಸ್ಯೆ ಸಲ್ಮಂಆಕ್ತಾರಿ, ರಮೇಶ್ಕುಮಾರ್, ಡಾ.ಚಂದ್ರಮೌಳಿ, ಡಾ.ಸಂತೋಷ್, ವಕೀಲ ರಾಜಶೇಖರ್, ಹೆಬ್ಬಾಳು ಪುಟ್ಟಸ್ವಾಮಿ, ಟಿವಿಎಸ್ ಸುರೇಶ್ ಇನ್ನು ಮುಂತಾದವರು ಇದ್ದರು. ಇದೇ ಸಂದರ್ಭದಲ್ಲಿ ಡಾ.ಚಂದ್ರಮೌಳಿ ಮತ್ತು ಡಾ.ಸಂತೋಷ್ ಪೊಲೀಸ್ ಸಿಬ್ಬಂದಿ ಮತ್ತು ಪುರಸಭಾ ನೌಕರರಿಗೆ ಆರೋಗ್ಯ ತಪಾಸಣೆ ನಡೆಸಿದರು.