ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಂಗ್ರೆಸ್ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ

Rashmi Kasaragodu
Updated On : 27 Dec 2013, 1:26 am

ಕ.ಪ್ರ.ವಾರ್ತೆ   ಹಾಸನ   ಡಿ. 26
ಕಾಂಗ್ರೆಸ್ ಕಾರ್ಯಕರ್ತರು ವಿನಾಕಾರಣ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅರಸೀಕೆರೆ ಕ್ಷೇತ್ರ ಜೆಡಿಎಸ್ ಮುಖಂಡರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಮಂಜೂರಾಗಿರುವ ಯೋಜನೆಗಳಿಗೆ ಕೆಲ ಕಾಂಗ್ರೆಸ್ ಪುಡಾರಿಗಳು ಇಲ್ಲ ಸಲ್ಲದ ಆರೋಪ ಮಾಡಿ ತಹಸೀಲ್ದಾರ್ ಮೂಲಕ ತಡೆಯೊಡ್ಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುವರ್ಣ ಗ್ರಾಮ ಯೋಜನೆಯಡಿ ಕೆಲ ಗ್ರಾಮಗಳಿಗೆ ಕಾಂಕ್ರಿಟ್ ರಸ್ತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ನಾನಾ  ಕಾಲೋನಿಗಳಿಗೆ ಕಾಂಕ್ರಿಟ್ ರಸ್ತೆ ಮಂಜೂರಾಗಿದ್ದು, ಲ್ಯಾಂಡ್ ಆರ್ಮಿಯವರು ನಿರ್ವಹಿಸುತ್ತಿದ್ದಾರೆ. ತರಲಾಗಿರುವ ಜಲ್ಲಿಗೆ ರಾಯಲ್ಟಿ ನೀಡಿರುವುದಿಲ್ಲ. ತಹಸೀಲ್ದಾರ್ಗೆ ದೂರು ನೀಡಿ ಜಲ್ಲಿಯನ್ನು ಸೀಜ್ ಮಾಡಿಸಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಈ ವಿಷಯದ ಬಗ್ಗೆ ಪೂರ್ಣವಾಗಿ ಗ್ರಾಮ ಜನರೆ ಹೇಳುತ್ತಾರೆ ಎಂದ ಅವರು, ಕ್ಷೇತ್ರದ ಅಭಿವೃದ್ಧಿಯನ್ನು ಸಹಿಸದ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  
ಸರ್ಕಾರಿ ಯೋಜನೆಗಳಿಗಲ್ಲದೆ ಖಾಸಗಿ ಕಾಮಗಾರಿಗಳಿಗೆ ಒಂದೇ ಒಂದು ಲೋಡ್ ಜಲ್ಲಿಯನ್ನು ಶಾಸಕರು ಕೊಡಿಸಿರುವುದಿಲ್ಲ. ಈ ಕ್ರಷರ್ನಿಂದ ಖಾಸಗಿಯವರಿಗೆ ಶಾಸಕರು ಜಲ್ಲಿಯನ್ನು ಕೊಡಿಸುವುದಾಗಿ ಕಾಂಗ್ರೆಸ್ ಮುಖಂಡರು ಪದೇ ಪದೇ  ಆರೋಪಿಸುತ್ತಿದ್ದಾರೆ. ಕೆ.ಎಂ. ಶಿವಲಿಂಗೇಗೌಡರು ಸಾವಿರಾರು ಕೋಟಿ ಅನುದಾನವನ್ನು ತಂದು ತಾಲೂಕು ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದರೇ ಅಭಿವೃದ್ಧಿ ಸಹಿಸದ ಕಾಂಗ್ರೆಸ್ ಕಾರ್ಯಕರ್ತರು ವಿನಕಾರಣ ಸುಳ್ಳು ಪ್ರಚಾರ ಮಾಡುವ ಮೂಲಕ ಅಡ್ಡಿಪಡಿಸುತ್ತಿದ್ದಾರೆ ಎಂದರು.
ಈ ಕೂಡಲೇ ಇಂತಹವರ ಮೇಲೆ ಕ್ರಮ ಜರುಗಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಇದೆ ವೇಳೆ  ಜಿಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹುಚ್ಚೇಗೌಡ ಜಿಪಂ ಉಪಾಧ್ಯಕ್ಷ ಬಿಳಿಚೌಡಯ್ಯ, ಕುರುವಂಕ ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ, ಪುರಸಭೆ ಅಧ್ಯಕ್ಷ ಕೆ.ಎನ್. ಮೋಹನ್ಕುಮಾರ್, ಜಿ.ಎಸ್. ಹನುಮಪ್ಪ, ತಾಪಂ ಅಧ್ಯಕ್ಷ ಎಚ್.ಟಿ. ಶಿವಮೂರ್ತಿ ಇತರರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement