ಕಾವಲು ಅಮ್ಮನ ದೇವಾಲಯ ಗೋಪುರದ ಕಳಸ ಪ್ರತಿಷ್ಠಾಪನೆ
ರಾಮನಾಥಪುರ: ಪಟ್ಟಣದ ಗ್ರಾಮದೇವತೆ ಹಾಗೂ ಇಲ್ಲಿನ ಶಕ್ತಿ ದೇವತೆ ಕಾವಲುಅಮ್ಮನ ದೇವಾಲಯ ಗೋಪುರ ಕಳಸ ಪುನರ್ ಪ್ರತಿಷ್ಠಾಪನೆ ಮಾಡಲಾಯಿತು. ಗೋಪುರದ ಕಳಸ ಕಳವು ಮಾಡಲಾಗಿದ್ದ ಹಿನ್ನೆಲೆಯಲ್ಲಿ ಕಾವಲುಅಮ್ಮ ಟ್ರಸ್ಟ್ ವತಿಯಿಂದ ನೂತನ ಕಳಸ ಪುನರ್ ಪ್ರತಿಷ್ಠಾಪಿಸಲಾಯಿತು. ನೂತನವಾಗಿ ನಿರ್ಮಿಸಲಾಗಿರುವ ಕನ್ನಂಬಾಡಿ ಅಮ್ಮನ ದೇವಾಲಯದ ಗೋಪುರಕ್ಕೂ ಕಳಸ ಪ್ರತಿಷ್ಠಾಪಿಸಲಾಯಿತು. ದೇವಿಗೆ ಪೂಜಾ ಕೈಂಕರ್ಯಗಳೊಂದಿಗೆ ಹೋಮ ಹವನ ಸಲ್ಲಿಸಿ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಟ್ರಸ್ಟಿನ ಮುಖ್ಯಸ್ಥ ರಾಮಚಂದ್ರು, ದೇವರಾಜರಾವ್, ನಿವೃತ್ತ ಶಿಕ್ಷಕ ಸೋಮಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಆರ್.ಎಸ್. ನರಸಿಂಹಮೂರ್ತಿ, ಲಲಿತ ಕುಮಾರ್, ಗ್ರಾಪಂ ಸದಸ್ಯೆ, ಹೋರಿಸಿದ್ದಯ್ಯ, ಸವಿತ ಸಮಾಜದ ಸದಸ್ಯ ಸೋಮಶೇಖರ್, ಗ್ರಾಪಂ ಬಿಲ್ ಕಲೆಕ್ಟರ್ ದೊರೆ ಐಬಿ ಸರ್ಕಲ್ ಮಹದೇವ ಇತರರು ಇದ್ದರು.