ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲಾ ಕಾಂಗ್ರೆಸ್ನಲ್ಲಿ ಅಸಮಾಧಾನ ಉಲ್ಬಣ

Rashmi Kasaragodu
Updated On : 27 Dec 2013, 1:26 am

ಕ.ಪ್ರ.ವಾರ್ತೆ   ಹಾಸನ   ಡಿ. 26
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಶತ್ರುವಾಗಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಅವರೇ ದೊಡ್ಡ ಶತ್ರುವಾಗಿದ್ದಾರೆ ಎಂಬಿತ್ಯಾದಿ ಟೀಕಾ ಪ್ರಹಾರ ಮಾಡಿದ್ದ ಸ್ಥಳೀಯ ಮೂವರು ಮುಖಂಡರನ್ನು ಪಕ್ಷದಿಂದ ಅಮಾನತು ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷರನ್ನು ಒತ್ತಾಯಿಸುವ ನಿರ್ಣಯವನ್ನು ಗುರುವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ಶೇಷೇಗೌಡ, ರಾಜೀವ್ಗಾಂಧಿ ಪಂಚಾಯತ್ ರಾಜ್ ಘಟಕದ ಅಧ್ಯಕ್ಷ ಸಿ.ವಿ. ರಾಜಪ್ಪ ಮತ್ತು ಕಾಂಗ್ರೆಸ್ ಎಸ್ಸಿ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಸಿ. ಸಣ್ಣಸ್ವಾಮಿ ಅವರನ್ನು ಕೂಡಲೇ ಪಕ್ಷದಿಂದ ಅಮಾನತು ಮಾಡಬೇಕು ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೇ ವಿರುದ್ಧವೇ ಬಹಿರಂಗವಾಗಿ ಟೀಕಿಸಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರುವುದನ್ನು ಖಂಡಿಸಿ, ಸಭೆಯ ನಿರ್ಣಯವನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಲು ತೀರ್ಮಾನಿಸಲಾಯಿತು.
ಮುಖಂಡರು ಮಾತನಾಡಿ, ಶೇಷೇಗೌಡ, ಸಣ್ಣಸ್ವಾಮಿ ಮತ್ತಿತರರು ಜಿಲ್ಲಾಧ್ಯಕ್ಷರ ವಿರುದ್ಧವೇ ಟೀಕೆ ನಡೆಸುವುದು ಸರಿಯಲ್ಲ. ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಣ್ಣಸ್ವಾಮಿ ಮತ್ತಿತರರು ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡಿದ್ದ ದಾಖಲೆಯನ್ನು ಪಕ್ಷದ ರಾಜ್ಯ ಮುಖಂಡರ ಗಮನಕ್ಕೆ ತರಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸೇರಿದಂತೆ ಅನೇಕ ಮುಖಂಡರು, ಹಾಸನ ಜಿಲ್ಲಾ ಸಮಿತಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರ ಅರಿವು ಇಲ್ಲದೇ ಜಿಲ್ಲಾಧ್ಯಕ್ಷರ ವಿರುದ್ಧ ಕೀಳು ಮಟ್ಟದ ಟೀಕೆ ಮಾಡಲಾಗಿದೆ. ಇದು ಪಕ್ಕಾ ಪಕ್ಷ ವಿರೋಧಿ ಚಟುವಟಿಕೆಯಾಗಿದ್ದು, ಕೂಡಲೇ ಮೂವರನ್ನು ಪಕ್ಷದಿಂದ ಅಮಾನತು ಮಾಡಬೇಕೆಂದು  ಆಗ್ರಹಿಸಿದರು. ಅದಕ್ಕೆ ಸಭೆ ಸಮ್ಮತಿಸಿತು. ನಂತರ ಮೂವರನ್ನು ಅಮಾನತು ಮಾಡುವ ಬಗ್ಗೆ ನಿರ್ಣಯ ಮಾಡಿ, ಕೆಪಿಸಿಸಿ ಅಧ್ಯಕ್ಷರಿಗೆ ಕಳುಹಿಸಿ ಕೊಡಲು ಒಪ್ಪಲಾಯಿತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಎಚ್. ನಾರಾಯಣಗೌಡ ತಿಳಿಸಿದ್ದಾರೆ.
ಆರೋಪಕ್ಕೆ ಮಹತ್ವ ನೀಡುವುದಿಲ್ಲ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಶಿವರಾಂ ಅವರು, ಕೆಲ ದಿನಗಳ ಹಿಂದೆ ತಮ್ಮ ಪಕ್ಷದ ಕೆಲ ಮುಖಂಡರು ನನ್ನ ವಿರುದ್ಧ ಆರೋಪ, ಟೀಕೆ ಮಾಡಿದ್ದಾರೆ. ಅದಕ್ಕೆ ಮಹತ್ವ ನೀಡುವುದಿಲ್ಲ. ನೀಡಬೇಕಾದ ಅವಶ್ಯಕತೆಯೂ ಇಲ್ಲ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ ಬೇರೊಬ್ಬರು ನೇಮಕಗೊಂಡರೂ ಅವರ ವಿರುದ್ಧವೂ ಟೀಕೆ ಮಾಡುವುದು ನಿಲ್ಲುವುದಿಲ್ಲ.
ಜಿಲ್ಲೆಯ ಶಾಸಕರೊಬ್ಬರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ವಿಚಾರದಲ್ಲಿ ನನ್ನ ಬೆಂಬಲ ವಿದೆ ಎಂದು ಹೇಳಿದರು.
ಎಸ್.ಎಂ. ಆನಂದ್, ಡಿ. ಮಲ್ಲೇಶ್, ಮುಖಂಡ ಹೆಮ್ಮಿಗೆ ಮೋಹನ್, ಎಚ್.ಕೆ. ಮಹೇಶ್, ಎಚ್.ಕೆ. ಜವರೇಗೌಡ, ಪಟೇಲ್ ಶಿವಪ್ಪ, ಅಮೀರ್ಜಾನ್, ಬಾಲ ಶಂಕರ್ ಹಾಗೂ ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಭಾಗವಹಿಸಿದ್ದರು.


ದಿನ ದಿನಕ್ಕೆ ದಟ್ಟವಾದ ಬಂಡಾಯದ ಹೊಗೆ ...
ಜಿಲ್ಲಾ ಕಾಂಗ್ರೆಸ್ನಲ್ಲಿ ದಿನೇ ದಿನೇ ಬಂಡಾಯದ ಹೊಗೆ ದಟ್ಟವಾಗುತ್ತಿದೆ.  ಡಿ. 23 ರಂದು ಶೇಷೇಗೌಡ, ಡಿ. ಸಿ. ಸಣ್ಣಸ್ವಾಮಿ, ಸಿ.ವಿ.ರಾಜಪ್ಪ ನೇತೃತ್ವದಲ್ಲಿ ಕೆಲ ಕಾಂಗ್ರೆಸಿಗರು ಸಭೆ ನಡೆಸಿ, ಶಾಸಕ ಎ.ಮಂಜು ಅವರಿಗೆ ಶಾಸಕ ಸ್ಥಾನ ತಪ್ಪಲು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ  ಬಿ. ಶಿವರಾಂ ಅವರೇ ಕಾರಣ, ಅವರಿಂದ ಪಕ್ಷ ಸಂಘಟನೆ ಆಗುವುದಿಲ್ಲ. ಬದಲಿಗೆ ನಾಶವಾಗುತ್ತದೆ ಎಂದೆಲ್ಲಾ ಆಝೋಜಿಟಜಿ ಟೀಕೆ ಮಾಡಿದ್ದರು. ಇದನ್ನು ಖಂಡಿಸುವ ನಿರ್ಣಯವನ್ನು ಗುರುವಾರ ನಡೆದ ಜಿಲ್ಲಾ ಸಮಿತಿ ಕಾರ್ಯಕಾರಿ ಸಮಿತಿಯಲ್ಲಿ ತೆಗೆದುಕೊಂಡು, ಶಿವರಾಂ ವಿರುದ್ಧ ಟೀಕಿಸಿದ್ದ ಮೂವರನ್ನು ಪಕ್ಷದಿಂದ ಅಮಾನತುಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕೈ ಕಲಹ ಮತ್ತಷ್ಟು ಉಲ್ಬಣಗೊಳ್ಳುವ ಲಕ್ಷಣಗಳು ಕಾಣುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement