ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಡವನಹಳ್ಳಿಯಲ್ಲಿ ಬತ್ತದ ಬೆಳೆ ಕ್ಷೇತ್ರೋತ್ಸವ ಉದ್ಘಾಟನೆ

Rashmi Kasaragodu
Updated On : 27 Dec 2013, 1:27 am

ಕನ್ನಡಪ್ರಭ ವಾರ್ತೆ೤ ಹೊಳೆನರಸೀಪುರ೤ ಡಿ.26
ತಾಲೂಕು ಕೃಷಿ ಇಲಾಖೆಯಿಂದ ಹಳೇಕೋಟೆ ಹೋಬಳಿಯ ಹಡವನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಬತ್ತದ ಬೆಳೆ ಕ್ಷೇತ್ರೋತ್ಸವ ಹಾಗೂ ರೈತ ದಿನಾಚರಣೆ ನಡೆಯಿತು. ಕೋಡಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ  ಟಿ.ಕೆ.ಸುಜಾತ  ಕಾರ್ಯಕ್ರಮ ಉದ್ಘಾಟಿಸಿದರು.
ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಡಾ.ಭಾನುಪ್ರಕಾಶ್ ಮಾತನಾಡಿ, ಮಾಜಿ ಪ್ರಧಾನಿ ಚರಣಸಿಂಗ್  ನೆನಪಿನಾರ್ಥ ಅವರ ಹುಟ್ಟುಹಬ್ಬದ ದಿನವಾದ ಡಿ.23ರನ್ನು ರೈತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ರೈತ ಕುಟುಂಬದ ಚರಣಸಿಂಗ್ ಭೂ ಸುಧಾರಣಾ ಕಾಯ್ದೆಗಳನ್ನು ಮಾರ್ಪಾಡು ಮಾಡಿ, ಕೃಷಿ ಉತ್ಪನ್ನಕ್ಕೆ ತೆರಿಗೆ ಇಲ್ಲದಂತೆ ಮಾಡಿ ರೈತರಿಗೆ ಕೊಡುಗೆ ನೀಡಿದ್ದಾರೆಂದು ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್.ದೇವರಾಜು ಮಾತನಾಡಿ, ರೈತರು ಸಹಕಾರ ಸಂಘಗಳ ಸದಸ್ಯತ್ವ ಪಡೆದು ಸಹಕಾರ ಬ್ಯಾಂಕಿನಿಂದ ಪಡೆದ ಸಾಲವನ್ನು ಸಾಲ ಪಡೆದ ಉದ್ದೇಶಕ್ಕೆ ಬಳಸಿಕೊಂಡು ರೈತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವಂತೆ ಹೇಳಿದರು.
ಕೃಷಿಕ ಸಮಾಜದ ಅಧ್ಯಕ್ಷ ಹೊಯ್ಸಳ ಅಪ್ಪಾಜಿ ಮಾತನಾಡಿ, ತೋಟಗಾರಿಕೆ, ಪಶುಪಾಲನೆ ಇಲಾಖೆಗಳ ಜೊತೆ ರೈತರು ಸಂಪರ್ಕದಲ್ಲಿದ್ದು ಇಲಾಖೆಗಳಿಂದ ದೊರೆಯುವ ನಾನಾ ಸವಲತ್ತುಗಳನ್ನು ಪಡೆದುಕೊಂಡು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದರು. ತಾಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಹುಚ್ಚೇಗೌಡ  ಸರ್ಕಾರ ರೂಪಿಸುವ ಕಾರ್ಯಕ್ರಮರೈತರ ಪರವಾಗಿರಬೇಕೆಂದರು.
ಪ್ರಗತಿಪರ ರೈತ ನಿಂಗೇಗೌಡ ಮಾತನಾಡಿ, ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರವಾಗುವ ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಕೇಳುವ ಮತ್ತು ನೋಡುವ ಮೂಲಕ ತಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವಂತೆ ತಿಳಿಸಿದರು.
 ರೈತ ದಿನಾಚರಣೆ ಅಂಗವಾಗಿ 2012-13ನೇ ಸಾಲಿನ ತಾಲೂಕು ಮಟ್ಟದ ರಾಗಿ ಬೆಳೆ ಸ್ಪರ್ಧ್ಧೆಯಲ್ಲಿ ವಿಜೇತರಾದ ಎಲೆಚಾಗಹಳ್ಳಿ ಮಾದೇಶ-ಪ್ರಥಮ, ಚನ್ನಾಪುರದ ಮಹದೇವಪ್ಪ-ದ್ವಿತಿಯ, ಮಾಚಗೌಡನಹಳ್ಳ್ಳಿಯ ಕಾಳಮ್ಮ- ತೃತೀಯ ಬಹುಮಾನ ನೀಡಿ ಸನ್ಮಾನಿಸಲಾಯಿತು.
 ಎಪಿಎಂಸಿ ನಿರ್ದೇಶಕ  ಸಂಜೀವೆಗೌಡ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಜವರಯ್ಯ, ಸಾವಯವ ಕೃಷಿಕ ನಂಜುಂಡಪ್ಪ ಉಪಸ್ಥಿತರಿದ್ದರು. ಇಲಾಖೆ ಅಧಿಕಾರಿಗಳು ಹಾಗೂ ಹಡವನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತ ಅನುವುಗಾರರು ಹಾಜರಿದ್ದರು. ಸಹಾಯಕ ಕೃಷಿ ಅಧಿಕಾರಿ ಕೆ.ಸಿ.ಬಸವರಾಜಯ್ಯ ನಿರೂಪಿಸಿದರು. ಎಸ್.ಡಿ.ದ್ಯಾವೇಗೌಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement