ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದಿನಿಂದ ಪುರಾಣ ಪ್ರವಚನ ಕಾರ್ಯಕ್ರಮ

Mainashree
Updated On : 27 Dec 2013, 9:33 am

ಕ.ಪ್ರ.ವಾರ್ತೆ  ಅರಸೀಕೆರೆ  ಡಿ. 27
ತಾಲೂಕಿನ ಹಾರನಹಳ್ಳಿ ಕೋಡಿಮಠದ ಮಹಾತಪಸ್ವಿಗಳಾದ ಲಿಂಗೈಕ್ಯ ಶ್ರೀನೀಲಲೋಚನ ಸ್ವಾಮೀಜಿ 21ನೇ ವರ್ಷದ ಪುಣ್ಯಸ್ಮರಣಾರಾಧನೆ ಮತ್ತು ಶಿವಲಿಂಗ ಸ್ವಾಮಿಗಳ ಪುರಾಣ ಪ್ರವಚನ ಕಾರ್ಯಕ್ರಮಗಳನ್ನು  ಡಿ.28 ರಿಂದ ಜ.5 ರವರೆಗೆ ಒಂದು ವಾರ ಏರ್ಪಡಿಸಲಾಗಿದೆ ಎಂದು ತಾಲೂಕಿನ ಮಾಡಾಳು ಗುರು ಶಿವಬಸವ ಕುಮಾರಾಶ್ರಮದ ತೋಂಟದಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಕುಮಾರಾಶ್ರಮದಲ್ಲಿ ಡಿ.28 ರಂದುಸಂಜೆ ಆರಂಭವಾಗುವ ಈ ಧಾರ್ಮಿಕ ಸಮಾರಂಭದ ಸಾನಿಧ್ಯವನ್ನು ಹೊಸಪೇಟೆ ವೀರಶೈವ ಶಿವಯೋಗಿ ಮಂದಿರದ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ವಹಿಸುವರು. ಶನಿವಾರ ಸಂಜೆ ಪ್ರಾರಂಭವಾಗಲಿರುವ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಬೆಲಗೂರು ಕ್ಷೇತ್ರದ ಬಿಂಧು ಮಾಧವ ಶರ್ಮಾ ಸ್ವಾಮೀಜಿ, ತೋಂಟದಾರ್ಯ ಸ್ವಾಮೀಜಿ  ಆಗಮಿಸುವರು. ಮಾಜಿ ಸಚಿವ ಎಚ್.ಡಿ.ರೇವಣ್ಣ ಕಾರ್ಯಕ್ರಮ  ಉದ್ಘಾಟಿಸುವರು.  ಶಾಸಕ ಕೆ.ಎಂ.ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಬಸವ ಸಮಿತಿ ಗೌರವ ಕಾರ್ಯದರ್ಶಿ ಪ್ರಭುದೇವ ಚಿಗಟೇರಿ ಮತ್ತು ಮಾಜಿ ಪುರಸಭಾಧ್ಯಕ್ಷ ಎನ್.ಎಸ್.ಸಿದ್ದರಾಮಶೆಟ್ಟಿ, ತಾಲೂಕಿನ ಜಿಪಂ ಮತ್ತು ತಾಪಂ ಸದಸ್ಯರು ಹಾಗೂ ಇನ್ನಿತರ ಜನಪ್ರತಿನಿಧಿಗಳು ಭಾಗವಹಿಸುವರು.  
ಪುರಾಣ ಪ್ರವಚನ ಕಾರ್ಯಕ್ರಮ ಕುಮಾರ ವಿರೂಪಾಕ್ಷ ಸ್ವಾಮೀಜಿ ನಡೆಸುತ್ತಿದ್ದು, ಇದರೊಂದಿಗೆ ಪ್ರತಿದಿನ ಸಂಜೆ ಧಾರ್ಮಿಕ ಚಿಂತನಾ ವಿಚಾರ ಗೋಷ್ಠಿಗಳು, ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  
ಜ.4 ರಂದು  ಸಂಜೆ ಕುಮಾರಾಶ್ರಮದ ತೋಂಟದಾರ್ಯ ಸ್ವಾಮೀಜಿಗಳಿಗೆ ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗಿ ಸ್ವಾಮೀಜಿ  ಸಾನಿಧ್ಯದಲ್ಲಿ ಹೊಸಪೇಟೆಯ ಬೈಲತ್ತಗಿರಿ ಗ್ರಾಮದ ಅಂಗಡಿ ವೀರಭದ್ರಪ್ಪ ಮತ್ತು ಮಕ್ಕಳಿಂದ ತುಲಾಭಾರ ಕಾರ್ಯಕ್ರಮ ಜರುಗಲಿದೆ. ರಾಜ್ಯದ ಅನೇಕ ಮಠಗಳ ಸಾಧುಸಂತರು, ಸ್ವಾಮೀಜಿ  ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement