ಲೋಹ ಸಂಗ್ರಹ ಅಭಿಯಾನ
ಕ.ಪ್ರ.ವಾರ್ತೆ ಹಾಸನ ಡಿ. 27
ಸ್ಟಾಚ್ಯು ಆಫ್ ಯೂನಿಟಿ ಲೋಹ ಸಂಗ್ರಹ ಅಭಿಯಾನ ಜ.15ರಿಂದ 26ರವರೆಗೆ ನಡೆಯಲಿದೆ ಎಂದು ಸ್ಟಾಚ್ಯು ಆಫ್ ಯೂನಿಟಿ ಜಿಲ್ಲಾ ಸಂಚಾಲಕ ಅಮಿತ್‌ಶೆಟ್ಟಿ ತಿಳಿಸಿದರು.
ಗುಜರಾತಿನ ನರ್ಮದಾ ಅಣೆಕಟ್ಟಿನ ಹತ್ತಿರವಿರುವ ಸಾಧು ಐಲ್ಯಾಂಡಿನಲ್ಲಿ ವಿಶ್ವದಲ್ಲೇ ಅತೀ ದೊಡ್ಡದಾದ ಭಾರತರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ನಿರ್ಮಾಣ ಅಂಗವಾಗಿ ಜಿಲ್ಲೆಯಲ್ಲಿ ಲೋಹ ಸಂಗ್ರಹಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲೆ ಎಲ್ಲಾ ಗ್ರಾಮಗಳಿಂದ ರೈತರು ಉಪಯೋಗಿಸಿದ ಲೋಹ ಮತ್ತು ಮಣ್ಣನ್ನು ಸಂಗ್ರಹಿಸಿ ಗ್ರಾಮಗಳಲ್ಲಿ ಮೆರವಣಿಗೆ ನಡೆಸಿ ನಂತರ ತಾಲೂಕು ಸಮಿತಿಗೆ ನೀಡಲಾಗುವುದು. ತದನಂತರ ಜಿಲ್ಲಾ ಸಮಿತಿಗೆ ನೀಡಿ, ರಾಜ್ಯ ಸಮಿತಿಗೆ ಹಸ್ತಾಂತರಿಸಲಾಗುವುದು. ಈ ಲೋಹ ಸಂಗ್ರಹ ಅಭಿಯಾನ ಅಂಗವಾಗಿ ಡಿ.28ರಂದು ಕರ್ನಾಟಕ ಲೋಹ ಸಂಗ್ರಹಣ ಸಮಿತಿ ಸಹ ಸಂಚಾಲಕ ಸಚ್ಚಿದಾನಂದಮೂರ್ತಿ ಹಾಸನಕ್ಕೆ ಆಗಮಿಸಿ ಸಭೆಯನ್ನು ನಡೆಸಲಿದ್ದಾರೆ. ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕಿನ ಸಮಿತಿಯವರು ಭಾಗವಹಿಸಲಿದ್ದಾರೆ.
ಎಲ್ಲಾ ಗ್ರಾಮದಿಂದ ರೈತರು ಉಪಯೋಗಿಸಿದ ಲೋಹ ಮತ್ತು ಮಣ್ಣನ್ನು ಸಂಗ್ರಹಿಸಿ ಮೆರವಣಿಗೆ ಮೂಖಾಂತರ ತಾಲೂಕು ಸಮಿತಿಗೆ ತರುಲಾಗುವುದು ಹಾಗೂ ತಾಲೂಕು ಸಮಿತಿಯಿಂದ ತಂದ ಲೋಹ ಮತ್ತು ಮಣ್ಣನ್ನು ಜಿಲ್ಲೆಗೆ ಕೊಡಲಾಗುವುದು ಹಾಗೂ ಜಿಲ್ಲೆಯಿಂದ ರಾಜ್ಯಕ್ಕೆ ನೀಡುವುದಾಗಿ ಹೇಳಿದರು. ಆದ್ದರಿಂದ ಈ ಲೋಹ ಸಂಗ್ರಹ ಅಭಿಯಾನಕ್ಕೆ ಜಿಲ್ಲೆಯ ಜನತೆ ಸಹಕರಿಸುವಂತೆ ಮನವಿ ಮಾಡಿದರು. ಸಹ ಸಂಚಾಲಕ ವೇಣುಗೋಪಾಲ್ ಇದ್ದರು.