ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಪ್ರ ನೌಕರ ಬಳಗದ ಕ್ಯಾಲೆಂಡರ್ ಬಿಡುಗಡೆ

Mainashree
Updated On : 27 Dec 2013, 9:31 am

ಅರಸೀಕೆರೆ: ಮಕ್ಕಳು ಭಾರತೀಯ ಸಂಸ್ಕೃತಿಯ ಅರಿವಿಲ್ಲದೆ ಸಂಸ್ಕಾರದ ಕೊರತೆಯಿಂದ ಸೊರಗುತ್ತಿವೆ. ಪೋಷಕರು ಹಾಗೂ ಸಮಾಜ ಈ ಬಗ್ಗೆ ಎಚ್ಚೆತ್ತು ಮಕ್ಕಳಲ್ಲಿ ತಿಳಿವಳಿಕೆ ನೀಡುವ ಮೂಲಕ ಸಂಸ್ಕಾರವಂತರನ್ನಾಗಿ ಮಾಡಿ ರೂಪಿಸುವ ಕಾರ್ಯ ಹೆಚ್ಚಾಗಿ ಆಗಬೇಕಿದೆ ಎಂದು ಸಂಸ್ಕಾರ ಭಾರತಿಯ ಮಂಗಳೂರು ವಿಭಾಗದ ಸಂಚಾಲಕ ಆದರ್ಶ ಗೋಖಲೆ ಕಿವಿಮಾತು ಹೇಳಿದರು.
 ಪಟ್ಟಣದ ಸಮೀಪವಿರುವ ಮಾಲೇಕಲ್ಲು ತಿರುಪತಿಯ ಚಂದ್ರಶೇಖರ ಸಭಾಂಗಣದಲ್ಲಿ ನಡೆದ ವಿಪ್ರ ನೌಕರರ ಮತ್ತು ಕುಟುಂಬ ವರ್ಗದ ಸಮಾವೇಶದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದ ಅವರು ಸಹಸ್ರಾರು ವರ್ಷಗಳಿಂದಲೂ ವಿಪ್ರರು ಮುಂಚೂಣಿಯಲ್ಲಿ ನಿಂತು ರಾಷ್ಟ್ರಕ್ಕೆ ಮಾರ್ಗದರ್ಶನ ಮಾಡಿದ್ದಾರೆ ಎಂದರು.
 ಸ್ವಹಿತಕ್ಕಾಗಿ ಚಿಂತಿಸದೆ ಸರ್ವೇ ಜನಾ ಸುಖಿನೋ ಭವಂತು ಸಮಸ್ತ ಸನಂಗಳಾನಿ ಭವಂತು ಎಂಬ ಧ್ಯೇಯ ವಾಕ್ಯದೊಂದಿಗೆ ಲೋಕ ಹಿತ ಬಯಸಿದ್ದಾರೆ. ಇಂದು ಅನೇಕ ವಿಪ್ರ ಮಕ್ಕಳು ಸಂಸ್ಕಾರದ ಕೊರತೆಯಿಂದ ಅಡ್ಡ ದಾರಿ ಹಿಡಿಯುವ ಅನೇಕ ಪ್ರಸಂಗಗಳು ನಡೆಯುತ್ತಿವೆ ಎಂದು ವಿಷಾದಿಸಿದ ಅವರು,  ತಕ್ಷಣವೇ ಎಚ್ಚೆತ್ತು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡುವಂತೆ ಅವರು ಮನವಿ ಮಾಡಿದರು.
 ಪ್ರಾಸ್ತಾವಿಕವಾಗಿ ಮಾತನಾಡಿದ  ಸಂಘದ ಅಧ್ಯಕ್ಷ ಕೆ.ಆರ್.ಸುರೇಶ್ ಸಂಘ ನಡೆದು ಬಂದ ದಾರಿ ಹಾಗೂ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು. ಸಂಘ ಮುದ್ರಿಸಿರುವ 2014ರ ಕ್ಯಾಲೆಂಡರ್ ಬಿಡುಗಡೆ ಮಾಡಿದ ಪತ್ರಕರ್ತ ಸೇತುರಾಂ ಮಾತನಾಡಿ, ನೌಕರ ವರ್ಗದವರು ಸದಾ ಸಮಾಜಮುಖಿಯಾಗಿ ಚಿಂತಿಸಿ ಕೆಲಸ ಮಾಡುವಂತೆ ಕೋರಿದರು.
 ಅಧ್ಯಕ್ಷತೆ ವಹಿಸಿದ್ದ ತಾ. ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ರಮೆಶ್ ಮಾತನಾಡಿ ಏನನ್ನಾದರು ಸಾಧಿಸಬಹುದು ಅಧಿಕಾರದಲ್ಲಿರುವ ನೀವು ಸಾಧ್ಯವಾದಷ್ಟು ಒಳ್ಳೆಯ ಕೆಲಸ ಮಾಡಿ ವಿಪ್ರ ಸಮಾಜಕ್ಕೆ ಹೆಸರು ತನ್ನಿ ಎಂದರು.  ಚಂದ್ರಶೇಖರ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಎ.ಗೋವಿಂದರಾವ್ ಜ್ಯೋತಿ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಕೆ.ಎಲ್.ಚಂದ್ರಶೇಖರ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
 ಸಮಾರಂಭದಲ್ಲಿ ನಿವೃತ್ತರಾಗಲಿರುವ ಜೆ.ಸಿ.ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪಾಂಡುರಂಗ ಹೆಬ್ಬಾರ್, ರೇಲ್ವೆ ಇಲಾಖೆಯ ಗುಂಡೂರಾವ್ ಅವರನ್ನು ತಾಲೂಕು ಬ್ರಾಹ್ಮಣ ಸಂಘದ ಕಾರ್ಯದರ್ಶಿ ಎಚ್.ಎಂ.ರಾಮಚಂದ್ರರಾವ್ ಸನ್ಮಾನಿಸಿದರು. ಸಂಘದ ಸದಸ್ಯರು ಮತ್ತು ಕುಟುಂಬ ವರ್ಗದವರಿಗೆ  ಅನೇಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜಯಕುಮಾರ್  ವೇದ ಘೋಷ, ಕಾಮೇಶ್ವರಿ ಪ್ರಾರ್ಥನೆ, ವಿಷ್ಣುಮೂರ್ತಿ ಭಟ್ ಸ್ವಾಗತಿಸಿದರು. ಡಾ.ಅಶೋಕ್‌ಕುಮಾರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement