ಶ್ರವಣದೋಷ ಮಕ್ಕಳಿಗೆ ನೋಟ್ಬುಕ್, ಪಠ್ಯ ವಿತರಣೆ
ಸಕಲೇಶಪುರ: ಯುವಕರು ವಾಜಪೇಯಿ ನಡೆ ನುಡಿಯನ್ನು ರೂಢಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಕ್ಯಾಮನಹಳ್ಳಿ ರಾಜ್ಕುಮಾರ್ ಹೇಳಿದರು.
ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ತಾಲೂಕಿನ ಕೌಡಳ್ಳಿ ಗ್ರಾಮದ ರೋಟರಿ ಗಣಪಯ್ಯ ಶ್ರವಣ ದೋಷ ಶಾಲೆಯಲ್ಲಿ ಮಕ್ಕಳಿಗೆ ನೋಟ್ಬುಕ್, ಪೆನ್ನು ಹಾಗೂ ಸಿಹಿ ಹಂಚಿ ಮಾತನಾಡಿದರು. ಅಜಾತ ಶತ್ರು ವಾಜಪೇಯಿಯಂತಹ ನೇರ ಜನಪರ ಆಡಳಿತಗಾರರು ಇಂದು ದೇಶಕ್ಕೆ ಅವಶ್ಯಕತೆ ಇದೆ. ಇನ್ನೊಂದು ಅವಧಿಗೆ ವಾಜಪೇಯಿ ಪ್ರಧಾನಿಯಾಗಿದ್ದರೆ ದೇಶದ ಚಿತ್ರಣವೇ ಬದಲಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು. ವಾಜಪೇಯಿ ಹಾಕಿಕೊಟ್ಟ ಹಾದಿಯಲ್ಲೇ ನಡೆಯುವ ಮೂಲಕ ಯುವ ಜನತೆ ದೇಶದ ಭವಿಷ್ಯಕ್ಕೆ ಉತ್ತಮ ಮಾರ್ಗ ರೂಪಿಸಬೇಕು ಎಂದರು. ಪ್ರಧಾನ ಕಾರ್ಯದರ್ಶಿ ಸಂದೇಶ್ ಇತರರು ಇದ್ದರು.