ಸುದ್ದಿ ಸಂಕ್ಷೇಪ
ಕುವೆಂಪು ಜನ್ಮ ದಿನಾಚರಣೆ
ಹೊಳೆನರಸೀಪುರ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕದಿಂದ ರಾಷ್ಟ್ರಕವಿ ಕುವೆಂಪು 109 ನೇ ಜನ್ಮದಿನಾಚರಣೆ ಅಂಗವಾಗಿ ಪಟ್ಟಣ ವ್ಯಾಪ್ತಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕುವೆಂಪು ರಚಿತ ಗೀತೆಗಳ ಗಾಯನ ಸ್ಪರ್ಧೆ ಡಿ.30ರಂದು ಹಮ್ಮಿಕೊಳ್ಳಲಾಗಿದೆ ಎಂದು ಆರ್.ಉಮೇಶ್, ಡಿ.ಕೆ.ರೇವಣ್ಣಾಚಾರಿ ತಿಳಿಸಿದ್ದಾರೆ.