ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರತಿಭಾ ಪುರಸ್ಕಾರ

Rashmi Kasaragodu
Updated On : 29 Dec 2013, 1:30 am

ಹೊಳೆನರಸೀಪುರ: ಪಟ್ಟಣದ ಬ್ರಾಹ್ಮಣ ಯುವ ಸಂಘ 29ರಂದು ಭಾನುವಾರ ಬೆಳಿಗ್ಗೆ ಹತ್ತುವರೆಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಕೋಟೆ ಶಂಕರಮಠದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಎ. ಶ್ರೀಧರ್ ತಿಳಿಸಿದ್ದಾರೆ.
ಸಮಾರಂಭವನ್ನು ಹಾಸನದ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಎಚ್.ವಿ. ರಾಮಕೃಷ್ಣ ಉದ್ಘಾಟಿಸಲಿದ್ದಾರೆ. ಎಚ್.ಕೆ. ಸುಧೀಂದ್ರ, ಪ್ರೊ. ಎ.ವಿ. ಸೂರ್ಯನಾರಾಯಣಸ್ವಾಮಿ, ರವಿರಾವನ್, ಬಿ.ವಿ. ಶ್ರೀಧರ್, ಬಿ.ಕೆ. ನಾಗಪ್ಪ ಭಾಗವಹಿಸಲಿದ್ದಾರೆ.
ತರಗತಿ ಪ್ರಾರಂಭ
ಹಾಸನ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವತಿಯಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಿ.ಎ., ಬಿ.ಕಾಂ ತರಗತಿಗಳಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಜ. 5ರಿಂದ ಪ್ರತಿ ಭಾನುವಾರ, ಎರಡನೇ ಶನಿವಾರ ಮತ್ತು ಸರ್ಕಾರಿ ರಜಾ ದಿನಗಳಂದು ವಾರಾಂತ್ಯ ತರಗತಿಗಳನ್ನು ಏರ್ಪಡಿಸಲಾಗಿದೆ ಎಂದು ಕೆಎಸ್ಒಯುನ ಹಾಸನ ಕಚೇರಿಯ ಪ್ರಾದೇಶಿಕ ನಿರ್ದೇಶಕ ಡಾ. ಪಿ. ಹರೀಶ್ ತಿಳಿಸಿದ್ದಾರೆ.
ಕಚೇರಿ ಸ್ಥಳಾಂತರ
ಹಾಸನ: ಸಾರ್ವಜನಿಕ ಹಿತದೃಷ್ಟಿಯಿಂದ ಹಾಸನ ನಗರಸಭಾ ಕಚೇರಿಯು ಬಿ.ಎಂ.ರಸ್ತೆಯಲ್ಲಿರುವ ಮುನಿಸಿಪಲ್ ಹೈಸ್ಕೂಲ್ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ನಗರಸಭೆ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.    
ಸಂಗೀತ ಕಲಿಕಾ ಶಿಬಿರ
ಹಾಸನ: ನಗರದ ನಾದಾಮತ ಸಂಗೀತ ಸಭಾ ಶಾಲೆಯಿಂದ ಡಿ. 29 ರ ವರೆಗೆ  ಉಚಿತವಾಗಿ ಸಂಗೀತ ಕಲಿಕಾ ಶಿಬಿರನ್ನು ಏರ್ಪಡಿಸಲಾಗಿದ್ದು ಸಂಗೀತಾ ಸಕ್ತರು  ಇದರ  ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಂಕಟಕೃಷ್ಣ, 5 ನೇ ಕ್ರಾಸ್, ಕೆ.ಆರ್.ಪುರಂ, ಹಾಸನ  ದೂರವಾಣಿ ಸಂಖ್ಯೆ 91649 40400, ಸಂಪರ್ಕಿಸಲು ಕೋರಲಾಗಿದೆ.
ಧನ ಸಹಾಯ
ಹಾಸನ: ಜಿಲ್ಲಾ ಒಕ್ಕಲಿಗರ ಸಂಘದಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯದ ಊಟದ ವ್ಯವಸ್ಥೆಗಾಗಿ ತಾಲ್ಲೂಕಿನ ಶಾಂತಿಗ್ರಾಮ ಹೋಬಳಿಯ ಚಿಗಳ್ಳಿ ಗ್ರಾಮದ ಸಿ.ಆರ್. ಜಗದೀಶ್ ರು. 6 ಸಾವಿರ ಧನಸಹಾಯ ಮಾಡಿದ್ದಾರೆ ಎಂದು ಸಂಘದ ಅಧ್ಯಕ್ಷ ಜಿ.ಎಲ್.  ಮುದ್ದೇಗೌಡ  ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement