ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸ್ತೆ ಬದಿಗೆ ಕೋಳಿ ತ್ಯಾಜ್ಯ: ತಡೆಯುವಂತೆ ಆಗ್ರಹ

Rashmi Kasaragodu
Updated On : 29 Dec 2013, 1:30 am

ಕ.ಪ್ರ.ವಾರ್ತೆ  ಹಾಸನ  ಡಿ. 28
ಕೊಣನೂರಿನ ಕೆಲ ಕೋಳಿ ಅಂಗಡಿ ವ್ಯಾಪಾರಿಗಳು ತಮ್ಮ ಕೋಳಿಯ ತ್ಯಾಜ್ಯವನ್ನು ಪ್ಲಾಸ್ಟಿಕಕ್ಚೀಲಕ್ಕೆ ಹಾಕಿ ಕೆರೆಕೋಡಿಯ ಕೆರೆ ಏರಿ ಮತ್ತು ಕೆರೆಕೋಡಿ ಗ್ರಾಮದ ಮುಂದೆ ಹಂಡ್ರಂಗಿ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಬದಿ ಹಾಕಲಾಗುತ್ತಿದೆ. ಈ ಪ್ಲಾಸ್ಟಿಕ್ನಲ್ಲಿ ತ್ಯಾಜ್ಯಗಳು ಕೊಳೆತು ಸಿಕ್ಕಾಪಟ್ಟೆ ದುರ್ನಾತ ಬೀರುತ್ತಿದ್ದು, ಈ ದಾರಿಯಲ್ಲಿ ತಿರುಗಾಡುವ ಪ್ರಯಾಣಿಕರು ಇದರಿಂದ ಬೀರುವ ದುರ್ಗಂಧ ತಾಳಲಾರದೇ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ.  
ಪ್ರಯಾಣ ಮಾಡುತ್ತಿದ್ದಾರೆ: ಇದು ಹೀಗೇ ಮುಂದುವರಿದಲ್ಲಿ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಜತೆಗೆ ಪ್ರಸಿದ್ಧ ಅರಸೀಕಟ್ಟೆಯಮ್ಮನ ದೇಗುಲಕ್ಕೆ ಬಂದು ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗಿ ಈ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದ್ದಾರೆ.  
ಕೊಣನೂರು ಗ್ರಾಮ ಪಂಚಾಯ್ತಿಯವರು ಇಲ್ಲಿನ ಕೋಳಿ ಅಂಗಡಿ ಮಾಲೀಕರು ವಿಸರ್ಜಿತ ತ್ಯಾಜ್ಯಗಳನ್ನು ಈ ರೀತಿ ರಸ್ತೆ ಬದಿಗೆ ಹಾಕದಂತೆ ಎಚ್ಚರಿಸುವುದರ ಜೊತೆಗೆ ಸೂಕ್ತ ಕ್ರಮವಹಿಸಿ ಕೋಳಿ ತ್ಯಾಜ್ಯಗಳನ್ನು ಸುರಿಯಲು ಒಂದು ಹೊಂಡ ತೆಗೆಸಿ, ಅದರಲ್ಲಿ ಸುರಿಸುವುದರಿಂದ ಉತ್ತಮ ಗೊಬ್ಬರವಾಗುತ್ತದೆ.  
ಇದನ್ನು ಪಂಚಾಯ್ತಿಯವರು ಹರಾಜು ಪ್ರಕ್ರಿಯೆ ಮಾಡಬಹುದು. ಅದು ಬಿಟ್ಟು ಈ ರೀತಿ ಪ್ಲಾಸ್ಟಿಕಕ್ಚೀಲಗಳಲ್ಲಿ ಹಾಕುವುದರಿಂದ ಇದು ಕರಗದೇ ತಿಂಗಳುಗಟ್ಟಲೆ ದುರ್ನಾತ ಬೀರುವುದು ಕಡಿಮೆಯಾಗುವುದಿಲ್ಲ. ಸಾಂಕ್ರಾಮಿಕ ರೋಗಗಳಿಗೆ ಅನುವು ಮಾಡಿಕೊಟ್ಟಂತಾಗುತ್ತದೆ.
ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಮುಂಜಾಗ್ರತೆ ವಹಿಸಿ, ಈ ರೀತಿ ರಸ್ತೆ ಬದಿಗೆ ಕೋಳಿ ತ್ಯಾಜ್ಯ ಸುರಿಯುವ ಕೋಳಿ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸುವುದರ ಮೂಲಕ ತಡೆಯುವಂತೆ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಹೆಚ್.ಇ. ಜಗದೀಶ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement