ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾಂತರಾಜುಗೆ ನೆರವಿಗೆ ಮನವಿ

Rashmi Kasaragodu
Updated On : 29 Dec 2013, 1:30 am

ಹಾಸನ: ಕಳೆದ 1 ವರ್ಷದಿಂದ ವಿಚಿತ್ರ ರೋಗದಿಂದ ಬಳಲುತ್ತಿರುವ ಶಾಂತರಾಜು ಅವರಿಗೆ ಸಹಾಯಹಸ್ತ ನೀಡುವಂತೆ ಪ್ರಕಾಶ್ ಮನವಿ ಮಾಡಿದ್ದಾರೆ.  ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನುಗ್ಗೇಹಳ್ಳಿ ಹೋಬಳಿಯ ದಾಸಪುರ ಗ್ರಾಮದ ವಾಸಿ ಡಿ.ಸಿ. ಜೋಸೆಫ್ ಹಾಗೂ ಜಿವಾನಿ ಅವರು ಪುತ್ರನಾಗಿದ್ದು, ಅವರ ದೇಹದಲ್ಲಿ ಕಳೆದ ಒಂದು ವರ್ಷದಿಂದ ಬಿಳಿ ರಕ್ತ ಹಾಗೂ ಕೆಂಪು ರಕ್ತಕಣಗಳ ಉತ್ಪತ್ತಿಯು ಸಂಪೂರ್ಣವಾಗಿ ನಿಂತು ಹೋಗಿದೆ. ಇದರಿಂದ ಪ್ರತಿ 20 ದಿನಗಳಿಗೊಮ್ಮೆ ಹೊಸ ರಕ್ತವನ್ನು ಶಾಂತರಾಜು ಅವರಿಗೆ ನೀಡಬೇಕಾಗಿದೆ. ಆದರೆ, ಆರ್ಥಿಕವಾಗಿ ಈ ಕುಟುಂಬ ಕಡು ಬಡವರಾಗಿದ್ದು, ತಮ್ಮ ಪುತ್ರನಿಗೆ ರಕ್ತವನ್ನು ಕೊಡಿಸಲು ಸಾಧ್ಯವಾಗುತ್ತಿಲ್ಲ. ಒಂದು ಬಾರಿ ರಕ್ತವನ್ನು ಕೊಡಿಸಲು ಸುಮಾರು 10 ಸಾವಿರ ರು.ಗಳವರೆಗೆ ಆಗುವುದರಿಂದ ಇದು ಸಾಧ್ಯವಾಗುವುದಾಗಿದೆ. ಶಾಂತರಾಜು ಅವರ ದೇಹದಲ್ಲಿ ಉಂಟಾಗಿರುವ ಕೊರತೆಯ ಚಿಕಿತ್ಸೆಗೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸುಮಾರು ರು. 5 ಲಕ್ಷಗಳಾಗಲಿದೆ ಎಂದು ತಿಳಿಸಿದ್ದಾರೆ. ಇದು ಈ ಬಡ ಕುಟುಂಬದಿಂದ ಸಾಧ್ಯವಾಗದ ಕಾರಣ ಸಹಾಯ ಹಸ್ತವನ್ನು ಕೋರುತ್ತಿದ್ದಾರೆ ಎಂದರು. ಈತ ವೃತ್ತಿಯಲ್ಲಿ ಚಾಲಕನಾಗಿದ್ದು, ಕಳೆದ 1 ವರ್ಷದಿಂದ ಆ ವೃತ್ತಿಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕುಟುಂಬ ನಿರ್ವಹಣೆಯೂ ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಹಾಯಹಸ್ತ ನೀಡವವರು ಶಾಂತರಾಜು, ನಂ.4350108001441, ಕೆನರಾ ಬ್ಯಾಂಕ್ ಅಕ್ಕನಹಳ್ಳಿ ಬ್ರಾಂಚ್, ನುಗ್ಗೇಹಳ್ಳಿ ಹಾಗೂ ಮೊ ನಂ.8971483503 ನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement