ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಲಿಂಗಿ ಪ್ರೇಮಿಗೆ ಮಚ್ಚಿನೇಟು!

Rashmi Kasaragodu
Updated On : 29 Dec 2013, 1:29 am

ರಾಮನಾಥಪುರ (ಅರಕಲಗೂಡು ತಾಲೂಕು): ಇದು ನಿಜಕ್ಕೂ ಅಘಾತಕಾರಿ ಘಟನೆ. ಯುವಕರು ಮಚ್ಚಿನಿಂದ ಬಡಿದಾಡಿಕೊಂಡು ಆಸ್ಪತ್ರೆಗೆ ಸೇರುವ ಘಟನೆಗಳು ನಡೆಯುತ್ತವೆ. ಆದರೆ ಅರಕಲಗೂಡು ತಾಲೂಕು ರಾಮನಾಥಪುರದಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರೇ ಮಚ್ಚಿನಿಂದಲೇ ಹೊಡೆದಾಡಿಕೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಮಚ್ಚಿನಿಂದ ಹಲ್ಲೆಗೆ ಒಳಗಾದ ವಿದ್ಯಾರ್ಥಿನಿ ರಶ್ಮಿ ಎಂಬಾಕೆಯನ್ನು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಚ್ಚಿನಿಂದ ಹಲ್ಲೆ ನಡೆಸಿದ ಜಿ.,ಸಿ. ಶೃತಿಯನ್ನು  ಕೊಣನೂರು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಕೊಣನೂರು ಬಿ.ಎಂ. ಶೆಟ್ಟಿ ಕಾಲೇಜ್ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯರು. ಪಿರಿಯಾಪಟ್ಟಣ ಆನಂದನಗರ ಬಡಾವಣೆಯ ಎ.ಜೆ. ರಶ್ಮಿ ಮತ್ತು ಅರಕಲಗೂಡು ತಾಲೂಕು ಮಲ್ಲಿಪಟ್ಟಣ ಹೋಬಳಿಯ ದೊಡ್ಡ ಬೊಮ್ಮತ್ತಿ ಗ್ರಾಮದ ಜಿ.ಸಿ. ಶೃತಿ ಇಬ್ಬರು ಸ್ನೇಹಿತರು. ಇಬ್ಬರು ಮದುವೆಯಾಗುವುದಾಗಿ ಬಹಿರಂಗವಾಗಿ ಘೋಷಣೆ ಮಾಡಿದ್ದರು. ಇದಕ್ಕೆ ಇಬ್ಬರು ಕಡೆ ಪೋಷಕರು ತೀವ್ರ ವಿರೋಧ ಮಾಡಿದ್ದರಲ್ಲದೇ,  ಕಾಲೇಜಿನ ಪ್ರಾಂಶುಪಾಲರು ಪರೀಕ್ಷೆಗೆ ಕೂರಲು ನಿರಾಕರಿಸಿದ್ದರು.
ಏತನ್ಮಧ್ಯೆ, ರಶ್ಮಿ, ಪ್ರಾಂಶುಪಾಲರಿಗೆ ಮುಂದೆ ಆಕೆ (ಶೃತಿ) ಸಹವಾಸ ಮಾಡುವುದಿಲ್ಲ. ಎಂದು ಕ್ಷಮೆ ಕೋರಿದಳು. ಇದಕ್ಕೆ ಒಪ್ಪಿದ ಪ್ರಾಂಶುಪಾಲರು ರಶ್ಮಿಗೆ ಪರೀಕ್ಷೆ ಕೂರಲು ಅವಕಾಶ ಮಾಡಿಕೊಟ್ಟರು. ಇದರಿಂದ ಕುಪಿತಳಾದ, ಶೃತಿ, ರಶ್ಮಿ ಜೊತೆಗೆ ಜಗಳವಾಡಿದ್ದಳು.
ಇದನ್ನು ಗಣನೆಗೆ ತೆಗೆದುಕೊಳ್ಳದ ರಶ್ಮಿ, ಎಂದಿನಂತೆ ಗುರುವಾರ ಕಾಲೇಜಿಗೆ ಹೋಗಿ ಪಿರಿಯಾಣಪಟ್ಟಣಕ್ಕೆ ಶನಿವಾರ ಮಧ್ಯಾಹ್ನ 3 ರಲ್ಲಿ ಸರ್ಕಾರಿ ಬಸ್ನಲ್ಲಿ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಬಸ್ನಲ್ಲಿ ಕ್ಯಾತೆ ತೆಗೆದ ಶೃತಿ, ರಶ್ಮಿಯೊಂದಿಗೆ ಜಗಳವಾಡಿದ್ದಾಳೆ. ಆಗ ಶೃತಿ ಮಚ್ಚಿನಿಂದ ರಶ್ಮಿ ಮೇಲೆ ಹಲ್ಲೆ ನಡೆಸಿದ್ದಾಳೆ. ಇದರಿಂದ ಕುತ್ತಿಗೆ ಭಾಗ ತೀವ್ರವಾಗಿ ಗಾಯಗೊಂಡಿರುವ ರಶ್ಮಿಯನ್ನು ಕೂಡಲೇ ಸ್ಥಳೀಯ ಪಿರಿಯಾಪಟ್ಟಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ರಶ್ಮಿಯನ್ನು ಬಂಧಿಸಿರುವ ಕೊಣನೂರು ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement