ಅಧ್ಯಕ್ಷರಾಗಿ ಪೂರ್ಣೇಶ್ ನೇಮಕ
ಬೇಲೂರು: ತಾಲ್ಲೂಕಿನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾಗಿ ಪೂರ್ಣೇಶ್ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಸಿ.ವಿ ರಾಜಪ್ಪ ತಿಳಿಸಿದ್ದಾರೆ. ಅಖಿಲ ಭಾರತ ರಾಜೀವ್ ಗಾಂಧಿ ಪಂಚಾಯತ್ ಸಂಘಟನೆಯ ಅಧ್ಯಕ್ಷ ಮಣಿಶಂಕರ್ ಅಯ್ಯರ್, ರಾಜ್ಯಾಧ್ಯಕ್ಷ ಶರಣ ಪ್ರಕಾಶ್ ಪಾಟೀಲ್, ಇವರ ಆದೇಶದಂತೆ ಪೂರ್ಣೇಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿಭಾ ಕಾರಂಜಿ:ಪ್ರಣವ್ಗೆ ಪ್ರಥಮ
ಹಾಸನ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ 2013-14ನೇ ಸಾಲಿನ ಪ್ರತಿಭಾ ಕಾರಂಜಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ನಗರದ ಉದಯೋ ನ್ಮುಖ ಶಾಲೆಯಾದ ರಾಯಲ್ ಅಪೋಲೋ ಇಂಟರ್ ನ್ಯಾಷನಲ್ ಸ್ಕೂಲ್ನ 9ನೇ ತರಗತಿ ವಿದ್ಯಾರ್ಥಿ ಪ್ರಣವ್ ಎಸ್. ಭಾರದ್ವಾಜ್ ಮೊದಲಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾನೆ.