ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೀರಪ್ಪ, ಆಂಥೋನಪ್ಪನಿಗೆ ಸನ್ಮಾನ

Rashmi Kasaragodu
Updated On : 30 Dec 2013, 1:45 am

ಕ.ಪ್ರ.ವಾರ್ತೆ     ಹಾಸನ     ಡಿ.29
ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಹಾಗೂ ಪ್ಯಾರಾ ಒಲಂಪಿಕ್ಸ್ನ ಅಂತಾರಾಷ್ಟ್ರಿಯ ಕ್ರೀಡಾಪಟು ಅಂಥೋನಪ್ಪನವರನ್ನು ಶನಿವಾರ ಬೆಂಗಳೂರು ನಗರದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಅಂಗವಿಕಲ ನೌಕರರ ರಾಜ್ಯ ಸಮ್ಮೇಳನ,ಬೆಳ್ಳಿ ಹಬ್ಬ ಮತ್ತು ಕಾರ್ಯಾಗಾರದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯಾಧ್ಯಕ್ಷ  ಎಸ್. ರೇಣುಕಾರಾಧ್ಯ, ಪ್ರಧಾನ ಕಾರ್ಯದರ್ಶಿ ಟಿ.ಟಿ. ಗಿರಿಯಪ್ಪ, ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ, ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ  ಮಹಾದೇವಯ್ಯ ಮಠಪತಿ, ಅಂಗವಿಕಲರ ಅಧಿನಿಯಮದ ಆಯುಕ್ತ ಎಸ್. ರಾಜಣ್ಣ,ನಿರ್ದೇಶಕ ಜಯವಿಭಯಸ್ವಾಮಿ, ಸಂಘದ ಹಾಸನ ಜಿಲ್ಲಾಧ್ಯಕ್ಷ ಎಚ್.ಜೆ. ರಾಮಕೃಷ್ಣಯ್ಯ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement