ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ
ಹಾಸನ: ಡಾ. ಬಿ.ಆರ್. ಅಂಬೇಡ್ಕರ್ರವರ 57ನೇ ಪರಿನಿರ್ವಾಣ ದಿನದ ಅಂಗವಾಗಿ ಇತ್ತೀಚೆಗೆ ಎಂ.ಟಿ.ಎಸ್.ಎಸ್. ಯೂತ್ಸ್ ಗ್ರೂಪ್ ಹಾಗೂ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಆಶ್ರಯದಲ್ಲಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು.
ಚಿತ್ರಕಲಾ ಶಿಕ್ಷಕ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ್ರವರ ಬಾಲ್ಯದ ಜೀವನ ಮತ್ತು ಅವರು ಎದುರಿಸಿದ ಕಷ್ಟದ ಪರಿಸ್ಥಿತಿಗಳನ್ನು ಮಕ್ಕಳಿಗೆವಿವರಿಸಿದರು. ಚಿತ್ರಕಲೆ ಮಕ್ಕಳ ಜೀವನವನ್ನು ವಿನ್ಯಾಸಗೊಳಿಸಲು ಸಹಕಾರಿಯಾಗುತ್ತದೆ. ಚಿತ್ರಕಲೆಯಲ್ಲಿ ಹಾಸನ ಮೊದಲಸ್ಥಾನದಲ್ಲಿದೆ ಇದು ಹಾಸನಕ್ಕೆ ಹೆಮ್ಮೆಯ ವಿಷಯ ಎಂದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಮಾತನಾಡಿ, ಅಂಬೇಡ್ಕರ್ರವರು ಬದುಕಿನುದ್ದಕ್ಕೂ ಕಷ್ಟಗಳನ್ನು ಎದುರಿಸುತ್ತಾ ಮೇಲೆ ಬಂದವರು. ಈಗಿನ ಯುವಜನರು ಅವರ ಹಾದಿಯನ್ನು ಅನುಸರಿಸಬೇಕು. ಯುವಜನರಲ್ಲಿ ಪರಿಸರ ಕಾಳಜಿಮೂಡಿಸಬೇಕು ಎಂದು ಹೇಳುತ್ತಾ, ಮಕ್ಕಳ ಜೀವನದಲ್ಲಿ ಚಿತ್ರಕಲೆಯ ಮಹತ್ವವನ್ನು ವಿವರಿಸಿದರು.
ಉಪನ್ಯಾಸಕ ಪ್ರಸಾದ್, ಸಮಾಜ ಸೇವಕ ಆರ್.ಜಿ. ಗಿರೀಶ್ ಹಾಗೂ ಕಾರ್ಯಕ್ರಮದ ಪ್ರಾಯೋಜತ್ವ ವಹಿಸಿದ್ದ ತೌಪಿಕ್, ಶಂಕರ್, ಚಂದ್ರಶೇಕರ್ ಹಾಗೂ ಎಂ.ಟಿ.ಎಸ್.ಎಸ್. ಯೂತ್ ಗ್ರೂಪ್ನ ಸದಸ್ಯರು ಇದ್ದರು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.