ಹೆಚ್ಡಿಕೆ ಹುಟ್ಟುಹಬ್ಬ ಪ್ರಯುಕ್ತ ಕ್ರಿಕೆಟ್ ಟೂರ್ನಿ
ಬೇಲೂರು: ಅರೇಹಳ್ಳಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಹೆಚ್.ಡಿ. ದೇವೇಗೌಡ ಕ್ರೀಡಾ- ಸಾಂಸ್ಕೃತಿಕ ಬಳಗವು ನಂದಿಗೋಡನಹಳ್ಳಿಯ ಸರ್ಕಾರಿ ಶಾಲಾ ಮೈದಾನದಲ್ಲಿ ಮಿನಿ ಕ್ರಿಕೆಟ್ ಟೂರ್ನಿ ಆಯೋಜಿಸಿತ್ತು. 35 ತಂಡಗಳು ಭಾಗವಹಿಸಿದ್ದವು. ಹಾಸನದ ಫ್ರೆಂಡ್ಸ್ ತಂಡವು ಮೊದಲ ಸ್ಥಾನ ಪಡೆದು, ರು. 10 ಸಾವಿರ ನಗದು ಹಾಗೂ ಪಾರಿತೋಷಕ, ಅರೇಹಳ್ಳಿಯ ರಾಮನಗರದ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆದು ರು. 5 ಸಾವಿರ ನಗದು ಹಾಗೂ ಪಾರಿತೋಷಕ ಗಳಿಸಿತು.ಮಾಜಿ ಸಚಿವ ಹೆಚ್.ಡಿ. ರೇವಣ್ಣ ಬಹುಮಾನ ವಿತರಿಸಿದರು. ಗ್ರಾಮದ ಮುಖಂಡರು, ಜೆಡಿಎಸ್ ನಾಯಕರು ಇದ್ದರು.