ಕನ್ನಡ ಅಧ್ಯಾಪಕರ ಸಂಘಕ್ಕೆ ಆಯ್ಕೆ
ಮೈಸೂರು: ಮೈಸೂರು ವಿವಿ ಪದವಿ ಕನ್ನಡ ಅಧ್ಯಾಪಕರ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಎಚ್.ಆರ್. ತಿಮ್ಮೇಗೌಡ, ಉಪಾಧ್ಯಕ್ಷರಾಗಿ ಡಾ.ಎಸ್.ಸಿ. ಯತೀಶ್ವರ್, ಕಾರ್ಯದರ್ಶಿಯಾಗಿ ಡಾ.ಕೆ. ತಿಮ್ಮಯ್ಯ, ಜಂಟಿ ಕಾರ್ಯದರ್ಶಿಯಾಗಿ ಡಾ. ಲತಾ ಮೈಸೂರು, ಖಜಾಂಚಿಯಾಗಿ ಡಾ.ಮಾ. ರಾಮಕೃಷ್ಣ, ಕಾರ್ಯಕಾರ್ರಿ ಸಮಿತಿ ಸದಸ್ಯರಾಗಿ ಮೈಸೂರು ಜಿಲ್ಲೆಗೆ ಪ್ರೊ. ಡಿ. ರಮೇಶ್, ಪ್ರೊ. ಕೃಷ್ಣಮೂರ್ತಿ ಮೈಸೂರು, ಡಾ.ಎಂ.ಎಸ್. ವೇದಾ, ಡಾ.ಪಿ. ಚಂದ್ರಶೇಖರ್, ಚಾಮರಾಜನಗರ ಜಿಲ್ಲೆಗೆ ಪ್ರೊ. ಕೃಪಾ. ಗಣೇಶ್, ಪ್ರೊ. ಸೀಗನಾಯಕ, ಮಂಡ್ಯ ಜಿಲ್ಲೆಗೆ ಪ್ರೊ. ಶಾರದಮ್ಮ, ಪ್ರೊ. ಮಹೇಶ್, ಹಾಸನ ಜಿಲ್ಲೆಗೆ ಪ್ರೊ. ಎಚ್.ಎಸ್. ಮಲ್ಲೇಶಗೌಡ, ಪ್ರೊ. ಜಿ.ಎನ್. ಅನಸೂಯ, ಡಾ.ಬಿ.ಸಿ. ಮಲ್ಲೇಶ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ಸಭೆಯಲ್ಲಿ ಪ್ರೊ. ಜಿ.ಟಿ. ವೀರಪ್ಪ, ಪ್ರೊ. ಎಂ. ನಟರಾಜ್, ಪ್ರೊ.ಚ. ಸರ್ವಮಂಗಳಬಾಯಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು. ಪ್ರೊ.ಸಿ.ವಿ. ಶ್ರೀಧರಮೂರ್ತಿ, ಪ್ರೊ.ವೈ.ಡಿ. ಲೀಲಾ, ಪ್ರೊ. ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು.