ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೊರೆಗಾಂವ್ ವಿಜಯೋತ್ಸವ ಇಂದು ಪಂಜಿನ ಮೆರವಣಿಗೆ

Rashmi Kasaragodu
Updated On : 31 Dec 2013, 1:49 am

ಕ.ಪ್ರ.ವಾರ್ತೆ    ಹಾಸನ    ಡಿ. 30
ದಲಿತ ಸಾಹಿತ್ಯ ಪರಿಷತ್, ಸಮತಾ ಸೈನಿಕ ದಳ, ಆಡುವಳ್ಳಿ ಹಾಗೂ ನಿಟ್ಟೂರು ಅಂಬೇಡ್ಕರ್ ಯುವಕ ಸಂಘದ ವತಿಯಿಂದ  ಡಿ. 31ರಂದು ಕೊರೆಗಾಂವ್ ವಿಜಯೋತ್ಸವದ ಅಂಗವಾಗಿ ಸಂಜೆ 7ಕ್ಕೆ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಅಂಬೇಡ್ಕರ್ ಪ್ರತಿಮೆವರೆಗೆ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಅಸ್ಪೃಶ್ಯರ ವಿದ್ಯೆಗಾಗಿ ಮರಣ ಹೊಂದಿದ 21 ವೀರ ಯೋಧರ ಸಮಾಧಿ ಸ್ಥಳಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿ ಜ. 1ರಂದು ಆಗಮಿಸಿ ಸಮಾಧಿಗೆ ನಮಿಸುತ್ತಿದ್ದರು. ಅಂಬೇಡ್ಕರ್ಸೇರಿದಂತೆ ಈ ದೇಶದ ಶೋಷಿತರಿಗೆ ಸಿಕ್ಕಿರುವ ವಿದ್ಯೆಗೆ ಕಾರಣರಾದವರು ಸಿದ್ದನಾಕ. ಕೊರೆಗಾಂವ್ನಲ್ಲಿ ವೀರಯೋಧರಿಗೆ ವಿಜಯಸ್ತಂಭ ಸ್ಥಾಪಿಸಲಾಗಿದ್ದು ಶೋಷಿತರು ಪ್ರತಿ ವರ್ಷ ಇಲ್ಲಿಗೆ ಬಂದು ನಮಿಸುತ್ತಾರೆ.
ಇದರ ನೆನಪಿಗೆ ಹಾಸನದಲ್ಲೂ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು,  ದಲಿತ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದಸಾಪ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಆರ್ಪಿಐ ಸತೀಶ್ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement