ಜ.5ಕ್ಕೆ ಕವಿಗೋಷ್ಠಿ
ಹಾಸನ: ಕಲಾವತಿ ಮಧುಸೂಧನ್ ಅವರ ಪ್ರಾಯೋಜಕತ್ವದಲ್ಲಿ ನಗರದ ಮಹಾರಾಜ ಪಾರ್ಕ್ನಲ್ಲಿರುವ ಯೋಗಶಾಲೆಯಲ್ಲಿ ಜ. 5ರಂದು 202ನೇ ಮನೆ ಮನೆ ಕವಿಗೋಷ್ಠಿನಡೆಯಲಿದೆ. ಮೊದಲಿಗೆ ಜಿಎಸ್ಎಸ್ ಕಾವ್ಯ- ಒಂದು ವಿಶ್ಲೇಷಣೆ ಎಂಬ ವಿಷಯದಡಿ ಕವಯತ್ರಿ ಸುಶೀಲಾ ಸೋಮಶೇಖರ್ ಉಪನ್ಯಾಸ ನೀಡಲಿದ್ದಾರೆ. ನಂತರ ಜಿಲ್ಲೆಯ ನಾನಾ ಕವಿ, ಕವಯತ್ರಿಯರಿಂದ ಕವನ ವಾಚನ ನಡೆಯಲಿದೆ ಹಾಗೂ ಜಿಎಸ್ಎಸ್ ಭಾವಗೀತೆಗಳ ಗಾಯನದ ಮೂಲಕ ನುಡಿ ನಮನ ಸಲ್ಲಿಸಲಾಗುವುದು. ಜಿಲ್ಲೆಯ ಆಸಕ್ತ ಸಾಹಿತ್ಯ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ.
ರಾಜ್ಯಮಟ್ಟಕ್ಕೆ ಆಯ್ಕೆ
ಜಾವಗಲ್: ಗುರುಕುಲ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿಯಾದ ಪ್ರೌಢಶಾಲಾ ವಿಭಾಗದ ಸಿ.ಬಿ. ಅಶ್ವಿನಿ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಎಸ್. ಲೋಚನ ಅವರು ಇತ್ತೀಚೆಗೆ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.