ನೆರವಿಗೆ ಮನವಿ
ಹಾಸನ: ತಮ್ಮ 20 ವರ್ಷದ ಮಗ ಶಶಿಕುಮಾರ್ನ ಎರಡೂ ಕಿಡ್ನಿ ವಿಫಲವಾಗಿದ್ದು, ಪರ್ಯಾಯ ಕಿಡ್ನಿ ವ್ಯವಸ್ಥೆ ಮಾಡಲು ದಾನಿಗಳು ನೆರವು ನೀಡುವಂತೆ ತಾಯಿ ರೇಣುಕಾ ಮನವಿ ಮಾಡಿದ್ದಾರೆ.
ನಗರದ ಬಾಗಡೇರ ಕೊಪ್ಪಲುನಲ್ಲಿ ವಾಸಿಯಾಗಿದ್ದು, ಹಾಸನ ನಗರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಸಾಲಗಾಮೆ ರಸ್ತೆಯ ಉಳಿತಾಯ ಖಾತೆ ನಂ. 677ಕ್ಕೆ ಹಣ ಜಮಾ ಮಾಡಿ ಈ ಬಡವಿ ಮಗನನ್ನು ಉಳಿಸಿ ಎಂದು ಪ್ರಾರ್ಥಿಸಿದ್ದಾರೆ. ಮೊ.ಸಂ. 8861028477.
ರಸಪ್ರಶ್ನೆ ಸ್ಪರ್ಧೆ
ಹಾಸನ: ಮೈಸೂರು ಸಮೀಪದ ಸುತ್ತೂರು ಕ್ಷೇತ್ರದಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಜನವರಿ 27 ರಿಂದ ಫೆ.1 ರವರೆಗೆ ನಡೆಯಲಿದೆ. ಪ್ರತಿ ವರ್ಷದಂತೆ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಮಡಿಕೇರಿ ಸಂಘಗಳ ಸದಸ್ಯರಿಗೆ ವ್ಯವಸ್ಥೆ ಮಾಡಿದ್ದು, ರಸಪ್ರಶ್ನೆ ವಿಷಯ ಶರಣೆಯರ ಬದುಕು ಮತ್ತು ಸಂದೇಶ ಎಂಬುದಾಗಿದೆ. ಜನವರಿ 2ನೇ ವಾರದಲ್ಲಿ ಸ್ಪರ್ಧೆ ನಡೆಯಲಿದ್ದು, ಮಾಹಿತಿಗಾಗಿ 0821- 2548201, 122, ಮೊ. 9448052678.