ವೀರಗಾಸೆ ನೃತ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ
ಕ.ಪ್ರ.ವಾರ್ತೆ ಜಾವಗಲ್ ಡಿ. 30
ಹಾಸನದಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಶಾಲೆಗಳ ಜಿಲ್ಲ್ಲಾಮಟ್ಟದ ಪ್ರತಿಭಾಕಾರಂಜಿ ಜಾನಪದ ಸ್ಪರ್ಧೆಯಲ್ಲಿ ಜಾವಗಲ್ ಹೋಬಳಿ ಕುರಾದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವೀರಗಾಸೆ ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲೆಗಳ ಕಿರಿಯರ ವಿಭಾಗದಲ್ಲಿ(1ರಿಂದ5) ವಿದ್ಯಾರ್ಥಿಗಳಾದ ಕೆ.ಎಮ್.ಚೇತನ್, ಕೆ.ಜೆ. ಹೇಮಂತ್, ಎಮ್.ಎಸ್. ಸುದೀಪ್, ಅಂಜನ್, ಅಭಿಷೇಕ್, ವೇಣು, ಕೇಶವನಾಯಕ್ ವೀರಗಾಸೆ ನೃತ್ಯವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದ್ದಾರೆ.
ಸತತವಾಗಿ ಈ ಶಾಲೆಯ ವಿದ್ಯಾರ್ಥಿಗಳು 4-5 ವರ್ಷಗಳಿಂದ ವೀರಗಾಸೆ ನೃತ್ಯ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಈ ಗ್ರಾಮದಲ್ಲಿ ವೀರಗಾಸೆ ನೃತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕುತ್ತಿದ್ದು, ಶಾಲೆಯ ಶಿಕ್ಷಕವರ್ಗ, ಹಿರಿಯ ವಿದ್ಯಾರ್ಥಿಗಳು ಹಾಗೂ ಎಸ್.ಡಿ.ಎಮ್.ಸಿ. ಸದಸ್ಯರು ಸಹಕಾರ, ಸಲಹೆ ಹಾಗೂ ಪ್ರೋತ್ಸಾಹ ನೀಡುತ್ತಿದ್ದಾರೆ.