ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂಬೇಡ್ಕರ್ ಭಾವಚಿತ್ರ ವಿರೂಪ: ಪ್ರತಿಭಟನೆ

Rashmi Kasaragodu
Updated On : 1 Jan 2014, 12:38 pm

ಕ.ಪ್ರ.ವಾರ್ತ್ಣೆ ರಾಮನಾಥಪುರ್ಣ ಡಿ 31
ಸಮೀಪದ ಕಾಳೇನಹಳ್ಳಿ ಪಂಚಾಯ್ತಿ ವ್ಯಾಪ್ತಿಗೆ ಬರುವ ಬಸವನಹಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಕಿಡಿಗೇಡಿಗಳು ಭಾವಚಿತ್ರವನ್ನು ವಿರೂಪಗೊಳಿದ ಹಿನ್ನೆಲೆ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಮಂಗಳವಾರ ಕೆಲಹೊತ್ತು ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.  
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪಿಎಸ್ಐ ಕಾಂತರಾಜೇ ಅರಸು ಸ್ಥಳದಲ್ಲೇ ಮೊಕ್ಕಾಂ ಹೂಡಿ ವಾತಾವರಣ ತಿಳಿಗೊಳಿಸಿದರು.  
ಗ್ರಾಮದ ಪರಿಶಿಷ್ಟ ವರ್ಗದ ಯುವಕ ದಿಲೀಪ್ ಮಾತನಾಡಿ, ಹಿಂದಿನಿಂದಲೂ ಈ ಗ್ರಾಮದಲ್ಲಿ ಸವರ್ಣಿಯರು ಹಿಂದುಳಿದ ವರ್ಗಗಳ ಮೇಲೆ ದರ್ಪ- ದೌರ್ಜನ್ಯದ ಅಟ್ಟಹಾಸ ತೋರುತ್ತಿದ್ದಾರೆ.  ಇಲ್ಲಿನ ದಲಿತರು ಈ ದೌರ್ಜನ್ಯವನ್ನು ಹೇಳಿಕೊಳ್ಳದೇ, ಅನುಭವಿಸಲಾಗದೇ, ಭಯದ ವಾತಾವರಣದಲ್ಲಿ ಇದ್ದಾರೆ. ಆದರೆ, ಕಳೆದ ರಾತ್ರಿ ನಡೆದ ಅವಮಾನೀಯ ಘಟನೆಯಿಂದಾಗಿ ಇಲ್ಲಿನ ಪರಿಶಿಷ್ಟರು ರೊಚ್ಚಿಗೇಳುವಂತಾಗಿದೆ ಎಂದರು.  
ದಿನೇದಿನೇ ಹೆಚ್ಚುತ್ತಿದೆ: ಘಟನೆ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬಿಎಸ್ಪಿ ಜಿಲ್ಲಾ ಅಧ್ಯಕ್ಷ, ಖ್ಯಾತ ವಕೀಲ ಬಿ.ಸಿ. ರಾಜೇಶ್ ಮಾತನಾಡಿ, ಈ ರೀತಿ ಡಾ. ಅಂಬೇಡ್ಕರ್ ನಾಮಫಲಕ ವಿರೂಪಗೊಳಿಸಿರುವುದನ್ನು ಖಂಡಿಸಿ, ಅರಕಲಗೂಡು ತಾಲ್ಲೂಕಿನಲ್ಲಿ ಇತ್ತೀಚೆಗಷ್ಟೇ ರಾಗಿಮರೂರು, ಆನಂದೂರು, ಸುಬೇದಾರ್ ಕೊಪ್ಪಲು ಸೇರಿದಂತೆ ಈ ಬಸವನಹಳ್ಳಿಯಲ್ಲಿ ನಡೆದಿರುವ ಹೇಯ ಕೃತ್ಯ ನಿಜಕ್ಕೂ ಸಮಾಜ ತಲೆ ತಗ್ಗಿಸುವ ವಿಷಯವಾಗಿದೆ. ಈ ರೀತಿ ಅವಮಾನೀಯ ಘಟನೆ ಈ ತಾಲ್ಲೂಕಿನಲ್ಲಿ ಸರಣಿಯಾಗಿ ನಡೆಯುತ್ತಿರುವುದು ಇಲ್ಲಿನ ಪರಿಶಿಷ್ಟರ ದೌರ್ಭಾಗ್ಯ. ಈ ಹಿಂದೆ, 3 ಗ್ರಾಮಗಳಲ್ಲಿ ಕಿಡಿಗೇಡಿಗಳು ಈ ಕುಕೃತ್ಯ ಎಸಗಿದ್ದು, ಈ ಕುರಿತು ಸ್ಥಳೀಯ ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇಲ್ಲಿನ ಉಪ ಆರಕ್ಷಕ ನಿರೀಕ್ಷಕ ರಾಜು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತೋರುತ್ತಿರುವ ನಿರ್ಲಕ್ಷ್ಯತೆಯೇ ಈ ಗ್ರಾಮದಲ್ಲಿ ಇಂದು ನಡೆದಿರುವ ಅವಗಡಕ್ಕೆ ಸಾಕ್ಷಿಯಾಗಿದೆ. ಇಂತಹ ಘಟನೆಗಳಿಂದ ಶೋಷಿತ ದಲಿತರಿಗೆ ಸರಿಯಾದ ರಕ್ಷಣೆ ನೀಡಲಾಗುತ್ತಿಲ್ಲ. ಸುತ್ತಮುತ್ತಲೂ ಗ್ರಾಮಗಳಲ್ಲಿ ಅಪರಾಧಗಳ ಸರಮಾಲೆ ದಿನೇದಿನೇ ಹೆಚ್ಚುತ್ತಿದೆ ಎಂದು ಹರಿಹಾಯ್ದರು.  
ಸ್ಥಳೀಯ ಶಾಸಕ ಎ.ಮಂಜುರವರು ತಮ್ಮ ವೈಯಕ್ತಿಕ ವಿಚಾರವನ್ನು ಬದಿಗೊತ್ತಿ ಈ ಸಮಯದಲ್ಲಿ ಸ್ಥಳಕ್ಕೆ ಭೇಟಿ ನೊಂದ ದಲಿತರಿಗೆ ನೆರವು ನೀಡಬೇಕೆಂದು ಒತ್ತಾಯಿಸಿದರು.
ಕೆಲಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಗಿ ಅಂಬೇಡ್ಕರ್ ನಾಮಫಲಕದ ಬಳಿ ಆರೋಪ ದಾಖಲಿಸಿರುವ ವ್ಯಕ್ತಿಗಳ ಹೆಸರಿನಲ್ಲಿ ಧಿಕ್ಕಾರ ಕೂಗಿ ಪ್ರತಿಭಟಿಸಲಾಯಿತು.  
ಈ ಸಂದರ್ಭದಲ್ಲಿ ತಾಲ್ಲೂಕು ಬಿಎಸ್ಪಿ ಅಧ್ಯಕ್ಷ ಮಹೇಶ್, ದಲಿತ ಸಂಘರ್ಷ ಸಮಿತಿ ಭೀಮವಾದ ಜಿಲ್ಲಾ ಅಧ್ಯಕ್ಷ ಹಂಪಾಪುರ ಜವರಯ್ಯ, ರಾಮನಾಥಪುರ ಹೋಬಳಿಯ ಅಧ್ಯಕ್ಷ ರಾಜೇಶ, ಕಾರ್ಯಕರ್ತರಾದ ಜೆ.ಆರ್. ಕುಮಾರ, ವಿಶ್ವನಾಥ, ಮಂಜು, ಹರೀಶ, ಕುಮಾರ ಉಪಸ್ಥಿತರಿದ್ದರು.
ಹೊಳೇನರಸೀಪುರ ಪ್ರೊಬೇಷನರಿ ಎಸ್ಪಿ ವಿನಾಯಕ್ ಪಾಟೀಲ್, ಅರಕಲಗೂಡು ಸಬ್ ಇನ್ಸ್ಪೆಕ್ಟರ್ ರೇವಣ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜು ಸ್ಥಳೀಯ ಪಿಡಿಒ ವಿಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement