ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಸ್ಸಿಂದ ಅಂಗವಿಕಲನನ್ನು ಹೊರದಬ್ಬಿದ ನಿರ್ವಾಹಕ

Rashmi Kasaragodu
Updated On : 1 Jan 2014, 12:38 pm

ಸಕಲೇಶಪುರ: ಸಾರಿಗೆ ಸಂಸ್ಥೆ ಬಸ್ ನಿರ್ವಾಹಕ ಅಂಗವಿಕಲರೊಬ್ಬರನ್ನು ಚಲಿಸುತ್ತಿರುವ ಬಸ್ಸಿನಿಂದಲೇ  ಹೊರದಬ್ಬಿದ ಅಮಾನವೀಯ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಮಾವಿನೂರು ಗ್ರಾಮದ ಬಸವರಾಜು (55) ನಿರ್ವಾಹಕನಿಂದ ಹೊರದಬ್ಬಲ್ಪಟ್ಟ ದುರ್ದೈವಿ.
ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಹೊಸ ಬಸ್ ನಿಲ್ದಾಣಕ್ಕೆ ತೆರಳಲು ಬಸ್ ಏರಿ ನಿರ್ವಾಹಕನಿಗೆ ಅಂಗವೈಕಲ್ಯ ಪಾಸ್ ತೋರಿಸಿದ ಸಂದರ್ಭದಲ್ಲಿ ನಿರ್ವಾಹಕ ಇವರೊಂದಿಗೆ ಅನುಚಿತವಾಗಿ ವರ್ತಿಸಿ ಬಸ್ನಿಂದ ಹೊರದಬ್ಬಿದ್ದಾನೆ. ಬಸವರಾಜುವಿಗೆ ಪ್ರಾಣಕ್ಕೆ ಯಾವ ಅಪಾಯವಾಗದೇ ಸಣ್ಣಪುಟ್ಟ ಗಾಯಗೊಂಡಿದ್ದು, ಅವರನ್ನು  ಸಾರ್ವಜನಿಕರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement