ಶಾರ್ಟ್ ಸರ್ಕ್ಯೂಟ್: ಮನೆಗೆ ಹಾನಿ
ಅರಕಲಗೂಡು: ತಾಲೂಕಿನ ಕೊಣನೂರು ಗ್ರಾಮದಲ್ಲಿ ಮನೆಯೊಂದರಲ್ಲಿ ವಾಷಿಂಗ್ ಮೆಷೀನ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮನೆಗೆ ಬೆಂಕಿ ತಗುಲಿದ ಪ್ರಸಂಗ ನಡೆದಿದೆ. ಕೊಣನೂರು ಕೋಟೆ ವಾಸಿ ಗಣೇಶ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.
ಸಹಾಯಕ್ಕೆ ಮನವಿ
ಹಾಸನ: ಮಂಜುನಾಥ್ ಆದ ನಾನು ನಗರದ ಗೌರಿಕೊಪ್ಪಲಿನಲ್ಲಿ ವಾಸ ವಿದ್ದು ನನಗೆ ಎರಡು ಕಿಡ್ನಿಗಳು ವಿಫಲ ವಾಗಿ ಸುಮಾರು 4 ವರ್ಷಗಳಿಂದ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಇತ್ತೀಚೆಗೆ ಕಾಯಿಲೆ ಸ್ವರೂಪ ತೀವ್ರವಾಗಿದ್ದು ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿ ಸಬೇಕಾಗಿರುವ ಕಾರಣ ನಮ್ಮಲ್ಲಿ ಹಣದ ಕೊರತೆ ಇದ್ದು, ಡಯಾಲಿಸಿಸ್ ಮಾಡಿಸಲು ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ದಯಮಾಡಿ ತಾವುಗಳು ನನ್ನ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಈ ಮೂಲಕ ತಮ್ಮಲ್ಲಿ ವಿನಯ ಪೂರ್ವಕ ವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ. ಮಂಜುನಾಥ್ ಜಿ.ಆರ್. ಅಕೌಂಟ್. ನಂ. 64132273993, ಮೊ. 9731363537
ಜಾಗೃತಿ ಸಮಾವೇಶ
ಹಾಸನ: ರಾಜ್ಯ ಮಡಿವಾಳ ಸಂಘದಿಂದ ಜ.5ರಂದು ಬೆಳಿಗ್ಗೆ 9.30 ಘಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜಾಗೃತಿ ಸಮಾವೇಶ ಏರ್ಪಡಿಸಲಾಗಿದೆ.