ಕಮಲಹಾಸನ್ ಬೆಂಗಳೂರಿಗೆ ಬಂದರೆ ಆಶ್ರಯ: ಅಶೋಕ
ಹಾಸನ: ಭಾರತ ಕಂಡ ಮಹಾನ್ ಕಲಾವಿದ ಕಮಲಹಾಸನ್ ಬೆಂಗಳೂರಿಗೆ ಬರುವುದಾದರೆ ವಸತಿ ಇತರೇ ಸಕಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಉಪ ಮುಖ್ಯಮಂತ್ರಿ, ಗೃಹ ಸಚಿವ ಆರ್. ಅಶೋಕ್ ತಿಳಿಸಿದರು.
ನೈಜ ಕಲಾವಿದ ಕಮಲಹಾಸನ್ ಅವರಿಗೆ ಬೇಸರವಾಗುವ ರೀತಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ನಡೆದುಕೊಂಡಿರುವುದು ತರವಲ್ಲ. ಇದರಿಂದ ಬೇಸತ್ತು ಕಮಲಹಾಸನ್ ದೇಶ ಬಿಟ್ಟು ಹೋಗುವುದಾಗಿ ಹೇಳಿರುವುದು ದುರದೃಷ್ಟಕರ.
ಅವರು ಬೆಂಗಳೂರಿಗೆ ಬಂದು ನೆಲಸಲಿ. ದೇಶ ಬಿಟ್ಟು ಹೋಗುವುದು ಬೇಡ ಎಂದು ಹಾಸನ ತಾಲೂಕು ದುದ್ದ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಆಹ್ವಾನಿಸಿದರು.
ಕೇಂದ್ರ ಸೆನ್ಸಾರ್ ಮಂಡಳಿಯೇ ವಿಶ್ವರೂಪಂ ಚಿತ್ರ ಪ್ರದರ್ಶನಕ್ಕೆ ಒಪ್ಪಿಗೆ ನೀಡಿದೆ. ಇದನ್ನು ಮರೆತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಚಿತ್ರವನ್ನು ಬ್ಯಾನ್ ಮಾಡಿರುವುದು ಮೂರ್ಖತನದ್ದು.
ಅಲ್ಲದೇ ಮಹಾನ್ ನಟನಿಗೆ ಅಪಮಾನ ಮಾಡಿದಂತೆ. ಕರ್ನಾಟಕದಲ್ಲಿ ಚಿತ್ರ ಪ್ರದರ್ಶನಕ್ಕೆ ಬೆಂಬಲ ನೀಡಲಾಗುವುದು. ಜಯಲಲಿತಾ ಅವರು ಕಾವೇರಿ ವಿಚಾರದಲ್ಲೂ ತೊಂದರೆ ನೀಡುತ್ತಾರೆ.
ಅವರಿಗೆ ತೊಂದರೆ ನೀಡುವುದು ಚಾಳಿ ಮತ್ತು ಚಟ. ತೊಂದರೆ ಕೊಡಲಿಕ್ಕೆ ಬೇರೆಯವರು ಸಿಗದಿದ್ದರೇ ತಮ್ಮ ಕುಟುಂಬದವರಿಗೆ ತೊಂದರೆ ನೀಡುವಂಥಹ ವಿಘ್ನ ಸಂತೋಷಿ ಜಯಲಲಿತಾ ಎಂದು ಟೀಕಾ ಪ್ರಹಾರ ನಡೆಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.