ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಾತ್ಕಾಲಿಕ ಉದ್ಘೋಷಕರಿಗೆ ಆಹ್ವಾನ

Parashurama
Updated On : 1 Feb 2013, 10:02 am

ಹಾಸನ: ಆಕಾಶವಾಣಿ ಹಾಸನ ಕೇಂದ್ರವು ತಾತ್ಕಾಲಿಕ ಉದ್ಘೋಷಕರಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಿದೆ. ಪದವಿ ಪಾಸಾಗಿರಬೇಕು. 35 ವರ್ಷದೊಳಗಿರುವ ಸ್ಥಳೀಯರಿಗೆ ಮಾತ್ರ ಅವಕಾಶ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಇರಬೇಕು. ಸ್ಪಷ್ಟ ಉಚ್ಛಾರ ಹೊಂದಿರಬೇಕು. ಆಸಕ್ತರು, ರಜಾದಿನಗಳನ್ನು ಹೊರತುಪಡಿಸಿ ಕಚೇರಿ ವೇಳೆಯಲ್ಲಿ ಖುದ್ಧಾಗಿ ಬಂದು 10 ರು. ಸಲ್ಲಿಸಿ ಅರ್ಜಿ ಪಡೆಯಬೇಕು. ಆಗತ್ಯ ದಾಖಲೆಗಳು ಮತ್ತು ಸಂಪೂರ್ಣ ವಿವರಗಳೊಂದಿಗೆ 300 ರು. ಶುಲ್ಕ ಎಂ.ಓ. ಮೂಲಕ ಭರಿಸಿ, ಭರ್ತಿ ಮಾಡಿದ ಅರ್ಜಿ ಫೆಬ್ರವರಿ 15 ರ ಒಳಗೆ ತಲುಪುವಂತೆ ಕಳುಹಿಸಬೇಕು. ಆಸಕ್ತರು ನಿಲಯ   ನಿರ್ದೇಶಕರು, ಆಕಾಶವಾಣಿ, ಸಾಲಗಾಮೆ ರಸ್ತೆ, ಹಾಸನ ಇವರಿಂದ ಅರ್ಜಿಗಳನ್ನು ಪಡೆಯಬಹುದು. ಈ ಹುದ್ದೆ ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು, ಯಾವುದೇ ಕಾರಣಕ್ಕೂ ಕಾಯಂಗೊಳಿಸಲಾಗುವುದಿಲ್ಲ. ಪಾಸಾದ ಅಭ್ಯರ್ಥಿಗಳಿಗೆ ಆಕಾಶವಾಣಿ ನೀಡುವ ವಾಣಿ ಸರ್ಟಿಫಿಕೇಟ್ ಕೋರ್ಸ್ ಕಡ್ಡಾಯವಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಅಭ್ಯರ್ಥಿಗಳು ಭರಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಳಾಸ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments