ಮೊದಲ ಶನಿವಾರ ಜನಸ್ಪಂದನ ಕಾರ್ಯಕ್ರಮ
ಹಾಸನ: ಸರ್ಕಾರದ ನಿರ್ದೇಶನದಂತೆ ಹೋಬಳಿಯ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿ ಮಾಹೆ ಮೊದಲ ಶನಿವಾರ, ಮೊದಲ ಶನಿವಾರ ರಜೆ ಇದ್ದಲ್ಲಿ ನಂತರದ ಸೋಮವಾರ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲು ದಿನಾಂಕ ನಿಗದಿಪಡಿಸಲಾಗಿದೆ. ಫೆಬ್ರವರಿ 2ರಂದು ಬೆಳಗ್ಗೆ 10 ಕ್ಕೆ ಸಾಲಗಾಮೆ ಗ್ರಾಮ ಪಂಚಾಯ್ತಿ ಕಚೇರಿ, ಮಾರ್ಚ್ 2ರಂದು ದುದ್ದ ಹೋಬಳಿಯ ಕುದುರಗುಂಡಿ ಗ್ರಾಮ ಪಂಚಾಯ್ತಿ ಕಚೇರಿ, ಏಪ್ರಿಲ್ 6ರಂದು ಶಾಂತಿಗ್ರಾಮ ಹೋಬಳಿಯ ಮರ್ಕುಲಿ ಗ್ರಾಮ ಪಂಚಾಯ್ತಿ ಕಚೇರಿ, ಮೇ 4ರಂದು ಕಟ್ಟಾಯ ಹೋಬಳಿಯ ಅಂಕಪುರ ಗ್ರಾಮ ಪಂಚಾಯ್ತಿ ಕಚೇರಿ, ಜೂನ್ 1ರಂದು ಕಸಬಾ ಹೋಬಳಿಯ ಕಂದಲಿ ಗ್ರಾಮ ಪಂಚಾಯ್ತಿ ಕಚೇರಿ, ಜುಲೈ 6ರಂದು ಸಾಲಗಾಮೆ ಹೋಬಳಿಯ ಸೀಗೆ ಗ್ರಾಮ ಪಂಚಾಯ್ತಿ ಕಚೇರಿ, ಆಗಸ್ಟ್ 3ರಂದು ದುದ್ದ ಹೋಬಳಿಯ ಅಟ್ಟಾವರ ಹೊಸಳ್ಳಿ ಗ್ರಾಮ ಪಂಚಾಯ್ತಿ ಕಚೇರಿ, ಸೆಪ್ಟಂಬರ್ 7ರಂದು ಶಾಂತಿಗ್ರಾಮ ಹೋಬಳಿಯ ಜಾಗರವಳ್ಳಿ ಗ್ರಾಮ ಪಂಚಾಯ್ತಿ ಕಚೇರಿ, ಅಕ್ಟೋಬರ್ 5ರಂದು ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿ, ನವೆಂಬರ್ 5ರಂದು ಕಸಬಾ ಹೋಬಳಿಯ ಉಗನೆ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಿಗದಿಪಡಿಸಲಾಗಿದೆ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.