ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರು. 30 ಕೋಟಿ ವೆಚ್ಚದಲ್ಲಿ ಪೊಲೀಸ್ ತರಬೇತಿ ಕೇಂದ್ರ

Parashurama
Updated On : 1 Feb 2013, 9:40 am

ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿಯ ಎ.ಜಿ. ಕೊಪ್ಪಲಿನ 50 ಎಕರೆ ಪ್ರದೇಶದಲ್ಲಿ 30 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪೊಲೀಸ್ ತರಬೇತಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆಯನ್ನು ಗೃಹ ಸಚಿವ ಆರ್. ಅಶೋಕ್ ಶುಕ್ರವಾರ ನೆರವೇರಿಸಿದರು.
ನಂತರ ಮಾತನಾಡಿದ ಸಚಿವರು ಪೊಲೀಸ್ ತರಬೇತಿ ಶಾಲೆ ಕಟ್ಟಡ 30 ಕೋಟಿ ರು. ವೆಚ್ಚದಲ್ಲಿ  ನಿರ್ಮಾಣವಾಗುತ್ತಿದ್ದು, ಇಲ್ಲಿ 500 ಪೊಲೀಸರಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಸುತ್ತಮುತ್ತಲ ಗ್ರಾಮದವರಿಗೆ ಉದ್ಯೋಗ ಲಭ್ಯವಾಗುವುದಲ್ಲದೆ, ಅಂಗಡಿ ತೆರೆಯಲು ಅವಕಾಶ ಸಿಗುತ್ತದೆ. ಈ ಸ್ಥಳದಲ್ಲಿ ಪೊಲೀಸ್ ತರಬೇತುದಾರರು ತಿರುಗಾಡುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯುವುದಕ್ಕೆ ಭಯ ಇರುತ್ತದೆ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮುಖ್ಯವಾಗಿದೆ ಎಂದು ನುಡಿದರು.
ಸ್ಥಳ ನೀಡಿದ ರೈತರಿಗೆ ಕೃತಜ್ಞತೆ:   ಕಟ್ಟಡ ನಿರ್ಮಿಸುವುದಕ್ಕೆ ರೈತರು ಸ್ಥಳ ನೀಡಿರುವದಕ್ಕೆ ಸಂತಸ ವ್ಯಕ್ತಪಡಿಸಿದ ಸಚಿವರು, ಇನ್ನಷ್ಟು ಸ್ಥಳ ನೀಡಿದರೆ ಕಟ್ಟಡ ಇನ್ನೂ ವಿಸ್ತರಿಸುವುದಾಗಿ ಹೇಳಿದರು. ಬೆಂಗಳೂರಿನ ಒಂದೇ ಸ್ಥಳದಲ್ಲಿ ತರಬೇತಿ ಶಾಲೆ ಮಾಡುವುದರ ಬದಲು ಜಿಲ್ಲೆಗಳಲ್ಲೂ ಕಟ್ಟಡ ನಿರ್ಮಿಸುವುದರ ಮೂಲಕ ಈ ಸ್ಥಳಕ್ಕೂ ಹೊರ ಭಾಗಗಳಿಂದ ತರಬೇತುದಾರರು ಬರುವಂತಾಗಬೇಕು ಎಂದು ಸಲಹೆ ನೀಡಿದರು.
ಜೆಡಿಎಲ್ಪಿ ನಾಯಕ ಎಚ್.ಡಿ.ರೇವಣ್ಣ  ಮಾತನಾಡಿ, ಶಾಂತಿಗ್ರಾಮ ತಾಲೂಕಿನ ಕೇಂದ್ರವಾಗಿ ಬೆಳೆಯಬೇಕು. 30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುತ್ತಿರುವ ಪೊಲೀಸ್ ತರಬೇತಿ ಶಾಲೆ ಕಟ್ಟಡ ಬರುವುದರಿಂದ ಇಲ್ಲಿನ ಗ್ರಾಮ ಅಭಿವೃದ್ಧಿಯಾಗಲಿ ಎಂದರು.
ವಿದ್ಯುತ್, ಮೇವು ಪೂರೈಸಲು ಮನವಿ:   ಈ ಭಾಗದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ವಿದ್ಯುತ್, ದನಕರುಗಳಿಗೆ ಮೇವು ಕೊಡಲು ಮುಂದಾಗುವಂತೆ ಮನವಿ ಮಾಡಿದ ಅವರು, ಜಿಲ್ಲೆಯಲ್ಲಿ ಎರಡು ಭಾಗದಲ್ಲಿ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಚಾಲನೆ ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.  ಇದೇ ವೇಳೆ ರೇವಣ್ಣ, ಉಪ ಮುಖ್ಯಮಂತ್ರಿ ಮತ್ತು ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು. ಸಮಾರಂಭಕ್ಕೆ ಮೊದಲು ಪೊಲೀಸ್ ಸಿಬ್ಬಂದಿಯಿಂದ ವಂದನೆ ಸ್ವೀಕರಿಸಿದರು.
 ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಮೈಸೂರು ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಕೆ.ರಾಮಚಂದ್ರ ರಾವ್, ಬೆಂಗಳೂರು ಪೊಲೀಸ್ ಮಹಾ ನಿರೀಕ್ಷಕರು ತರಬೇತಿಯ ಎಸ್. ಪರಶಿವಮೂರ್ತಿ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್, ಹೆಚ್ಚವರಿ ಪೊಲೀಸಜ್ವರಿಷ್ಠಾಧಿಕಾರಿ ಅಭಿನವ್ ಖರೆ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments