ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಂಗೀತ ಗ್ರಾಮದಲ್ಲಿ ತ್ಯಾಗರಾಜರ ಆರಾಧನೆ

Parashurama
Updated On : 1 Feb 2013, 10:13 am

ಅರಕಲಗೂಡು: ಸಂಗೀತ ಗ್ರಾಮವೆಂದೇ ಖ್ಯಾತಿ ಹೊಂದಿರುವ ರುದ್ರಪಟ್ಟಣದಲ್ಲಿ ವೇದೋಕ್ತ ಗಾಯನದ ಸಂಭ್ರಮ. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾದ ಸಂತ ತ್ಯಾಗರಾಜರ ಆರಾಧನೆ ಅಂಗವಾಗಿ ನಾದ ನಮನ ಸಲ್ಲಿಸಲಾಯಿತು.
    ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜ, ಗಾನಕಲಾಭೂಷಣ ವಿದ್ವಾನ್ ಆರ್.ಕೆ.ಪದ್ಮನಾಭದಾಸರ ನೇತೃತ್ವದಲ್ಲಿ ರುದ್ರಪಟ್ಟಣದ ಗ್ರಾಮಸ್ಥರು ಪಕ್ಕದ ಕಾವೇರಿ ನದಿಯಲ್ಲಿ  ಮಿಂದು ತ್ಯಾಗರಾಜರ ವಿಗ್ರಹಕ್ಕೂ ಸ್ನಾನ ಮಾಡಿಸಿ, ಗಣಪತಿ ಮತ್ತು ಯಮುನಾ ಪೂಜೆಯನ್ನು ನದಿ ತೀರದ ರಾಮೇಶ್ವರ ದೇವಾಲಯದಲ್ಲಿ ಮಹಾ ಮಂಗಳಾರತಿ ನೆರವೇರಿಸಿದರು.
  ದೇವಸ್ಥಾನದಿಂದ ಹೊರಟು ತ್ಯಾಗರಾಜರ ಕೃತಿಗಳನ್ನು ಭಜನೆ ಹಾಡಿಕೊಂಡು ಗ್ರಾಮದ ನಡುವೆ ಇರುವ ಸಪ್ತಸ್ವರ ದೇವತಾ ಧ್ಯಾನ ಮಂದಿರದಲ್ಲಿರುವ ಅವರ ಪ್ರತಿಮೆಗೆ ಪುಷ್ಪಗಳನ್ನು ಅರ್ಪಿಸಿ ಪಂಚರತ್ನ ಕೃತಿಗಳನ್ನು ಹಾಡಿದರು.  ನೆರೆಹೊರೆಯ ಊರುಕೇರಿಗಳಿಂದಲೇ ಏಕೆ ದೂರದ ಮೈಸೂರು-ಬೆಂಗಳೂರಿನಿಂದಲೂ ರಾತ್ರೋರಾತ್ರಿ ಧಾವಿಸಿದ್ದ ಸಂಗೀತ ಆರಾಧಕರೊಂದಿಗೆ ವೇದೋಕ್ತ, ಗಾನೋಕ್ತ ಮೆರವಣಿಗೆಯಲ್ಲಿ ತೀರ್ಥ ನಾರಾಯಣ ಸ್ವಾಮಿಯನ್ನು 5 ಕಳಸಗಳಲ್ಲಿ ಹೊತ್ತು ಆರ್.ಕೆ.ಪದ್ಮನಾಭರು ನಿರ್ಮಿಸಿರುವ ಸಪ್ತಸ್ವರ ದೇವತಾ ಧ್ಯಾನಮಂದಿರದಲ್ಲಿ ಕೆಲಕಾಲ ಇರಿಸಲಾಯಿತು. ಗಾನ ಸರಸ್ವತಿ ಮತ್ತು ಉಳಿದ ಆರು ಸ್ವರ ದೇವತೆಗಳ ಪಾದೋದಕದೊಡನೆ ಪಕ್ಕದ ಹೊಯ್ಸಳ ರಾಜವಂಶಜರಿಂದ ನಿರ್ಮಾಣಗೊಂಡ ಚೆನ್ನಕೇಶವ ಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿ ರುದ್ರಪಟ್ಟಣದ ರಾಮಮಂದಿರದಲ್ಲಿ ತ್ಯಾಗರಾಜರನ್ನು ಆವಾಹನೆ ಮಾಡಲಾಯಿತು. ಪಂಚಾಮೃತ ಅಭಿಷೇಕದ ಬಳಿಕ ನೆರೆದ ನೂರಾರು ಆರ್.ಕೆ.ಪದ್ಮನಾಭರ  ಶಿಷ್ಯರಿಂದ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments