ಸಕಲೇಶಪುರಕ್ಕೆ ಆಗಮಿಸಿದ ಸೈಕಲ್ ಪ್ರವಾಸದ ತಂಡ
ಸಕಲೇಶಪುರ: ಜನವರಿ 26 ರಂದು ರೋವರ್ ಸ್ಕೌಟ್ ಎ.ಎನ್. ನರೇಂದ್ರ ಕುಮಾರ್ ಕುಮಾರ್ ನೇತೃತ್ವದಲ್ಲಿ 15ಜನ ರೋವರ್ ಸ್ಕೌಟ್ಗಳೊಂದಿಗೆ ಪ್ರಾರಂಭವಾಗಿದ್ದ ಕರ್ನಾಟಕ ರಾಜ್ಯ ವ್ಯಾಪಿ ಸೈಕಲ್ ಪ್ರವಾಸ ತಂಡ ಗುರುವಾರ ಸಂಜೆ ಪಟ್ಟಣಕ್ಕೆ ಆಗಮಿಸಿತು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ಭರತ್ ಸಿಂಗ್ಓಪನ್ ರೋವರ್ ತಂಡ, ಆನೇಕಲ್ ವತಿಯಿಂದ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ.
ಅಪರಾಧ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಹಾಗೂ ಕಾನೂನು ಪರಿಪಾಲನೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ತಂಡವು ಈಗಾಗಲೇ ದೊಡ್ಡಬಳ್ಳಾಪುರ,ಹಾಲೇನಳ್ಳಿ, ಹೊಸದುರ್ಗ, ಕಡೂರು, ಮೂಡಿಗೆರೆ, ಗೋಣಿಬೀಡು, ಬೇಲೂರು ಮಾರ್ಗವಾಗಿ ಸಕಲೇಶಪುರಕ್ಕೆ ಆಗಮಿಸಿದ್ದು, ಇಲ್ಲಿನ ಸಂತ ಜೋಸೆಫರ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಶನಿವಾರ ಪಟ್ಟಣದಲ್ಲಿ ಸಾರ್ವಜನಿಕರು ಕಾನೂನು ಪರಿ ಪಾಲನೆಯಲ್ಲಿ ವಹಿಸ ಬೇಕಾದ ವಿಷಯ ಬಗ್ಗೆ ಮಾಹಿತಿ ನೀಡಲಾಗುವುದು. ಆಲೂರು, ಹಾಸನ ಮಾರ್ಗವಾಗಿ ಪ್ರಯಾಣ ಬೆಳೆಸಿ ಫೆ. 4ರಂದು ತಂಡ ಆನೇಕಲ್ ತಲುಪಲಿದೆ ಎಂದು ನಾಗಭೂಷಣ್ ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.