ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸ್ವಯಂ ಸೇವಕರ ಆಯ್ಕೆಗೆ ಆಹ್ವಾನ

Parashurama
Updated On : 1 Feb 2013, 10:15 am

ಹಾಸನ: ಕೇಂದ್ರ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ರಾಷ್ಟ್ರೀಯ ಯುವ ಪಡೆ ಎಂಬ ವಿನೂತನ ಕಾರ್ಯಕ್ರಮವನ್ನು ನೆಹರು ಯುವ ಕೇಂದ್ರಗಳ ಮೂಲಕ ಅನುಷ್ಠಾನಗೊಳಿಸುತ್ತಿದ್ದು, ಯುವ ಪಡೆಗೆ ಸ್ವಯಂ ಸೇವಕರ ಆಯ್ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
 ಜಿಲ್ಲಾವಾರು  ನಿಬಂಧನೆಗಳಿಗೆ ಅನುಗುಣವಾಗಿ ಯುವ ಜನರನ್ನು  ನೇಮಕ ಮಾಡಿಕೊಂಡು ಅವರಿಗೆ ತರಬೇತಿ ನೀಡುವ ಮೂಲಕ  ಅವರ ಗ್ರಾಮೀಣ ಪ್ರದೇಶದ  ಯುವ ಜನರನ್ನು  ಯುವಕ - ಯುವತಿ ಮಹಿಳಾ ಮಂಡಳಿಗಳನ್ನು ಸಂಘಟಿಸುವ ಹಾಗೂ ಅವರನ್ನು  ಸಮಾಜ ಮುಖಿಗಳನ್ನಾಗಿಸುವ  ಕಾರ್ಯವನ್ನು ನಿರ್ವಹಿಸಬೇಕಾಗಿದೆ.  ಈ ಜವಾಬ್ದಾರಿ ನಿರ್ವಹಿಸಲು ಇಚ್ಛಿಸುವವರು ನಾನಾ ಅರ್ಹತೆ  ಪಡೆದಿರಬೇಕು.
 ಅಭ್ಯರ್ಥಿಗಳು  ಕನಿಷ್ಠ ಪಿಯುಸಿ ಪಾಸಾಗಿರಬೇಕು. ಹೆಚ್ಚಿನ ವಿದ್ಯಾರ್ಹತೆಯವರಿಗೆ ಆದ್ಯತೆ ಇದೆ. 18-25  ವಯೋವುತಿ. ಕಡ್ಡಾಯವಾಗಿ ನೆಹರು ಯುವ ಕೇಂದ್ರದಲ್ಲಿ  ಸಂಯೋಜನೆಗೊಂಡ  ಯುವಕ ಯುವತಿ ಮಂಡಳಿಗಳ ಸದಸ್ಯರುಗಳಾಗಿರಬೇಕು. ಕಡ್ಡಾಯವಾಗಿ  ಹಾಸನ ಜಿಲ್ಲೆ ನಿವಾಸಿಗಳಾಗಿರಬೇಕು. ಯಾವುದೇ  ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಾಗಿರಬಾರದು. ಎಸ್ಸೆಸ್ಸೆಲ್ಸಿ ನಂತರ 3 ವರ್ಷಗಳ ಡಿಪ್ಲೋಮೋ ಕೋರ್ಸ್    ಪೂರ್ಣಗೊಳಿಸಿದವರು ಸಹ ಅರ್ಜಿ ಸಲ್ಲಿಸಲು ಅರ್ಹರು ಎಂದು ನೆಹರು ಯುವ ಕೇಂದ್ರದ ಅನಂತಪ್ಪ ತಿಳಿಸಿದ್ದಾರೆ.
 ಯೋಜನೆ ಅವಧಿ 2 ವರ್ಷ. ಮೊದಲ ವರ್ಷದಲ್ಲಿ ಅವರ ಕೆಲಸ ಕಾರ್ಯ ತೃಪ್ತಿಕರವಾಗಿದ್ದಲ್ಲಿ  ಮಾತ್ರ ಅವರ ಸೇವೆಯನ್ನು 2ನೇ ವರ್ಷಕ್ಕೆ ವಿಸ್ತರಿಸಲಾಗುವುದು. ಆಯ್ಕೆಯಾದವರು ತರಬೇತಿಗೆ ಹಾಜರಾಗುವುದು. ಕಡ್ಡಾಯವಾಗಿರುತ್ತಲ್ಲದೇ ತರಬೇತಿ ನಂತರ ಗ್ರಾಮಗಳಿಗೆ ತೆರಳಿ ಯುವ ಸಂಘಟನಾ ಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.
 ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಭಾವನೆ ಮತ್ತು ಪ್ರವಾಸದ ಭತ್ಯೆ ಮಾಹೆಯಾನ ರು. 2500 ಮಾತ್ರ ನೀಡಗಾಗುವುದು. ಮೇಲಿನ ನಿಬಂಧನೆಗಳಿಗೆ ಅನುಗುಣವಾಗಿ ಹಾಸನ ಜಿಲ್ಲೆಯ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ ಕಡೆಯ ದಿನವಾಗಿದ್ದು  ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ  ಜಿಲ್ಲಾ ಯುವ ಸಮನ್ವಯಾಧಿಕಾರಿಗಳು  ನೆಹರು ಯುವ ಕೇಂದ್ರ  ಜಿಲ್ಲಾ ಕ್ರೀಡಾಂಗಣ ಸಾಲಗಾಮೆ ರಸ್ತೆ ಹಾಸನ ಜಿಲ್ಲೆ, ಹಾಸನ 573201 (ದೂ 08172-246060 ) ಸಂಪರ್ಕಿಸಲು ಕೋರಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಮಂಡಳಿಗೆ ನೇಮಕ
ಅರಕಲಗೂಡು: ತಾಲೂಕಿನ ರಾಮನಾಥಪುರ ಹೋಬಳಿ ಕಾಂಗ್ರೆಸ್ ಕಾರ್ಯಕಾರಿ ಮಂಡಳಿಗೆ ಕೆಳಕಂಡವರನ್ನು  ನೇಮಕ ಮಾಡಲಾಗಿದೆ ಎಂದು ರಾಮನಾಥಪುರ ಹೋಬಳಿ ಬ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸಿ. ಮಂಜೇಗೌಡ ತಿಳಿಸಿದ್ದಾರೆ.
 ರಾಮನಾಥಪುರ ಹೋಬಳಿ ಕಾರ್ಯಾಧ್ಯಕ್ಷ ಶಿರದನಹಳ್ಳಿ ಎಸ್.ಬಿ. ಶಿವಣ್ಣ, ಉಪಾಧ್ಯಕ್ಷ ಬಸವಪಟ್ಟಣದ ಬಿ.ಕೆ. ಪ್ರಕಾಶ್ ಹಾಗೂ ಮಧುರನಹಳ್ಳಿ ಎಂ.ಡಿ. ಶ್ರೀನಿವಾಸ, ಖಜಾಂಚಿಯಾಗಿ ಬೆಟ್ಟೆಸೋಗೆ ವೀರೇಶ್, ಕೇರಳಾಪುರದ ನಾಗರಾಜು, ಕಾರ್ಯದರ್ಶಿಯಾಗಿ ಕಾಳೇನಹಳ್ಳಿ ರಾಮೇಗೌಡ, ರಾಗಿಮರೂರಿನ ಎಂ.ಸಿ. ರಾಮಚಂದ್ರ,  ಮಹಿಳಾ ವಿಭಾಗದ ಪ್ರದಾನ ಕಾರ್ಯದರ್ಶಿಯಾಗಿ ರಾಮನಾಥಪುರದ ಶಕುಂತಲಾ, ಕಾರ್ಯದರ್ಶಿಯಾಗಿ ಬಿಳಗುಲಿ ಪ್ರೇಮ ಅಯ್ಕೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಲೆಕ್ಕಪತ್ರ ನಿರ್ವಹಣೆ ಕಾರ್ಯಕ್ರಮ
ಬೇಲೂರು: ನಾವು ಇನ್ನೊಬ್ಬರ ಅಡಿಯಾಳಾಗಿ ಬಾಳುವುದನ್ನು ಬಿಟ್ಟು ಸ್ವತಂತ್ರವಾಗಿ ಬದುಕುವುದನ್ನು ಕಲಿಯಬೇಕು ಎಂದು ಆಕಾಶವಾಣಿಯ ವಿಜಯ ಅಂಗಡಿ ತಿಳಿಸಿದರು.
 ಕೃಷಿ ಇಲಾಖೆ ಆರ್‌ಕೆವಿ ಯೋಜನೆಯಡಿ ರೈತ ಸ್ವಶಕ್ತಿ ಸ್ವಸಹಾಯ ಸಂಘದ ಸದಸ್ಯರಿಗಾಗಿ ಹಗರೆ ಗ್ರಾಮದಲ್ಲಿ  ಏರ್ಪಡಿಸಿದ್ದ ಒಂದು ದಿನದ ಲೆಕ್ಕಪತ್ರ ನಿರ್ವಹಣೆ ಸಾಮರ್ಥ್ಯ ಬಲವರ್ಧನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments