ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೂಲ ಸೌಲಭ್ಯಕ್ಕೆ ಆಗ್ರಹಿಸಿ ನಿವಾಸಿಗಳ ಪ್ರತಿಭಟನೆ

Parashurama
Updated On : 3 Feb 2013, 11:30 am

ಹಾಸನ: ನಗರದ ಚನ್ನಪಟ್ಟಣ ಬಡಾವಣೆ ಕೆಎಚ್‌ಬಿ ಕಾಲೋನಿಗೆ ಮೂಲಭೂತ ಸೌಕರ್ಯಗಳಾದ ನೀರು, ಸಂಪರ್ಕ ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ನೀಡುವಂತೆ ಆಗ್ರಹಿಸಿ ಬಡಾವಣೆ ನಿವಾಸಿಗಳು ಭಾನುವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈಗಾಗಲೇ ಅಭಿವೃದ್ಧಿ ಪಡಿಸಿರುವ ಚನ್ನಪಟ್ಟಣ ಬಡಾವಣೆಯ ಕರ್ನಾಟಕ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ  ನಿರ್ಮಿಸಿರುವ  ನಿವೇಶನ ಮತ್ತು ಮನೆಗಳನ್ನು ಪಡೆಯಲಾಗಿದೆ. ಆದರೆ ನೂತನ ಬಡಾವಣೆಯ ಮಧ್ಯಭಾಗದಲ್ಲಿ  ನೀರು ಹರಿದು ಹೋಗಲು ನಿರ್ಮಿಸಿರುವ ಕಾಲುವೆ ದಕ್ಷಿಣ ಭಾಗದ ಮನೆ, ನಿವೇಶನಗಳಿಗೆ ನೇರ ರಸ್ತೆ ಸಂಪರ್ಕವಿಲ್ಲದೆ  ಚನ್ನಪಟ್ಟಣ ಕೆರೆ ದಕ್ಷಿಣ ಭಾಗದ ಕೆರೆಕೋಡಿ ಕಡೆಯಿಂದ  ಸುತ್ತಿ ಬಳಸಿ ಬರಬೇಕಾಗಿದೆ.
ಅಲ್ಲದೆ ಅಲ್ಲಿ ಈಗಾಗಲೇ ನ್ಯಾಯಾಲಯಗಳ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ನ್ಯಾಯಾಲಯಗಳು ಕಾರ್ಯ ಕಲಾಪ ನಡೆಸಲು ಪ್ರಾರಂಭಿಸಿದ ಮೇಲೆ ಜನಸಂದಣಿ ಹೆಚ್ಚಾಗಿ ಓಡಾಡಲು ತುಂಬಾ ಅನಾನುಕೂಲವಾಗಿದೆ ಎಂದು ನಿವಾಸಿಗಳು ಹೇಳಿದರು.  ಆದ್ದರಿಂದ ನೀರು ಹರಿಯಲು ನಿರ್ಮಿಸಿರುವ ಕಾಲುವೆಯ ದಕ್ಷಿಣ ಭಾಗದ ರಸ್ತೆಗೆ ಹಾಸನ - ಹೊಳೆನರಸೀಪುರ ರಸ್ತೆಯಿಂದ  ಸಂಪರ್ಕ ಮಾಡಿಸಿಕೊಡಬೇಕಾಗಿದೆ. ಈಗಾಗಲೇ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿರುವುದು ಸರಿ. ಆದರೆ ಸರಬರಾಜಾಗುತ್ತಿರುವ ನೀರು ಕಲುಷಿತವಾಗಿದ್ದು, ಸ್ನಾನ ಅಥವಾ ಕುಡಿಯಲು ಯೋಗ್ಯವಾಗಿಲ್ಲ. ಆದ್ದರಿಂದ ಹಾಸನ ನಗರಕ್ಕೆ ಸರಬರಾಜಾಗುವ ನದಿ ನೀರಿನ ಸಂಪರ್ಕ ಕಲ್ಪಿಸಿಕೊಡಬೇಕಾಗಿ ಒತ್ತಾಯಿಸಿದರು.
ಈ ಬಡಾವಣೆಗೆ ವಿದ್ಯುತ್ ಸಂಪರ್ಕವಿದ್ದು, ದಿನದಲ್ಲಿ ಎರಡು ಮೂರು ಗಂಟೆಗಳಷ್ಟು ಮಾತ್ರ ಇದ್ದು, ಉಳಿದಂತೆ ವಿದ್ಯುತ್ ಸರಬರಾಜು ಇರುವುದಿಲ್ಲ.  ಕೆಲವು  ಸಲ ವಾರಗಟ್ಟಲೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ವಿದ್ಯುತ್ ಸರಬರಾಜಿಗೆ ಸಮರ್ಪಕ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು.  ಪ್ರತಿಭಟನೆಯ ನೇತೃತ್ವವನ್ನು  ಚನ್ನಪಪಟ್ಟಣ ಕೆರೆ ಕೆಎಚ್‌ಬಿ ಕಾಲೋನಿ ನಿವಾಸಿಗಳಾದ  ಗೋಪಾಲಕೃಷ್ಣಶೆಟ್ಚಿ, ಮಹೇಶ್, ಮಧು, ಕೇಶವಮೂರ್ತಿ ವಹಿಸಿದ್ದರು.                                                                 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments