ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

' ಜೈನ ಕವಿಗಳಿಂದ ಕನ್ನಡ ಕಾವ್ಯ ಪರಂಪರೆ ಸಮೃದ್ಧಿ'

Parashurama
Updated On : 17 Feb 2013, 12:26 pm

ಹಾಸನ: ಕನ್ನಡ ಕಾವ್ಯ ಪರಂಪರೆ ಆರಂಭಿಸಿದ್ದರ ಜೊತೆಗೆ ಅದನ್ನು ಸಮೃದ್ಧಗೊಳಿಸಿದ ಕೀರ್ತಿಗೆ ಜೈನ ಕವಿ ಗಳು ಪಾತ್ರರಾಗಿದ್ದಾರೆ ಎಂದು ಪ್ರಾಧ್ಯಾಪಕ ಡಾ. ಎಚ್.ಎಲ್. ಮಲ್ಲೇಶಗೌಡ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ರಾಜೀವ್ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ನಡೆದ ದತ್ತಿ ಉಪನ್ಯಾಸ ಮಾಲಿಕೆಯ ಉದ್ಘಾಟನಾ ಸಮಾರಂಭದಲ್ಲಿ ಶ್ರವಣ ಬೆಳಗೊಳ ಗೊಮ್ಮಟೇಶ್ವರ ಸಹಸ್ರಾಬ್ದಿ ಸ್ಮಾರಕ ದತ್ತಿ ಉಪನ್ಯಾಸ ನೀಡಿದರು.
ಕನ್ನಡದ ಮೊದಲ ಉಪಲಬ್ಧ ಕೃತಿ ಕವಿರಾಜಮಾರ್ಗಕ್ಕಿಂತ ಮುನ್ನ 17 ನಂತರ 44 ಜೈನಕವಿಗಳು ಕನ್ನಡ ಸಾಹಿತ್ಯವನ್ನು ಸಮೃದ್ಧಿಗೊಳಿಸಿದ್ದಾರೆ. ಕುವೆಂಪು ರಾಮಾಯಣ ದರ್ಶನಂ ಮೇಲೆ ನಾಗಚಂದ್ರನ ರಾಮಚಂದ್ರ ಚರಿತ ಪುರಾಣದ ಪ್ರಭಾವ ಸಾಕಷ್ಟಿದೆ ಎಂದರು.
ಇಂದು ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಗರ್ಭೀಕೊಂಡಿರುವ ಜಗತ್ತಿನ 20 ಭಾಷೆಗಳಲ್ಲಿ ಓಂದು ಮತ್ತು ಸುಂದರ ಲಿಪಿಯನ್ನು ಹೊಂದಿರುವ 5 ಭಾಷೆಗಳಲ್ಲಿ ಓಂದಾಗಿರುವ ಕನ್ನಡಕ್ಕೆ ಜೈನ ಸಾಹಿತಿಗಳ ಕೊಡುಗೆ ಪ್ರಮುಖವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಎಚ್.ಎಲ್. ಜನಾರ್ದನ್ ಮಾತ ನಾಡಿ, ಸಾಹಿತ್ಯದ ಓದು ಉತ್ತಮ ಅಭಿರುಚಿ ಬೆಳೆಸುತ್ತದೆ. ಇದು ವಿದ್ಯಾರ್ಥಿಗಳಲ್ಲಿ ನೈತಿಕತೆಯನ್ನು ಬೆಳೆಸಲು ಶಿಕ್ಷಕರಿಗೆ ಸಹಕಾರಿಯಾಗುತ್ತದೆ ಎಂದು ನುಡಿದರು.
ಮಹಾಭಾರತದ ಹೂರಣ:  ಆಶಯ ನುಡಿಗಳನ್ನಾಡಿದ ಲೇಖಕ ಗೊರೂರು ಶಿವೇಶ್, ಮೂಲ ಮಹಾಭಾರತದ ಹೂರಣವನ್ನು ಆದಿಕವಿ ಪಂಪ ಬಳಸಿಕೊಂಡಿದ್ದರೂ ತನ್ನ ದರ್ಶನವನ್ನು ಪ್ರತಿಪಾದಿಸಲು ಅನೇಕ ಸನ್ನಿವೇಶಗಳನ್ನು ಸೃಷ್ಟಿಸಿರುವುದು ಆತನ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ರಾಜೀವ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಸುದೀಶ್ ಡಿ.ಎಸ್. ಮಾತನಾಡಿದರು. ಗಾಯಕ ಕೆ.ಎಲ್. ದಿವಾಕರ್ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್‌ನ  ಸುದರ್ಶನ್ ಡಿ.ಎಡ್. ಕಾಲೇಜಿನ ಪ್ರಾಚಾರ್ಯ ಸತ್ಯನಾರಾಯಣ್ ಇದ್ದರು. ಸರಳ ಹಾಗೂ ಸೋಮ ಶೇಖರ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement