ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಕ್ರಮ ಮದ್ಯ: ಇಬ್ಬರ ಬಂಧನ

Parashurama
Updated On : 17 Feb 2013, 12:27 pm

ಜಾವಗಲ್: ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು  ಪೊಲೀಸರು ಬಂಧಿಸಿರುವ ಘಟನೆ ಹೋಬಳಿಯಲ್ಲಿ ಶುಕ್ರವಾರ ನಡೆದಿದೆ.
 ಚಾಲಕ ಗೇರುಮರದ ಸುರೇಶ್ ಹಾಗೂ ಕಾಳನ ಕೊಪ್ಪಲು ಗ್ರಾಮದ ನವೀನ್ ಎಂಬವರೇ ಬಂಧಿತ ಆರೋಪಿಗಳು.
ಜಾವಗಲ್ ಹೋಬಳಿ ದೇಶಾಣಿ ಗ್ರಾಮದ ಸೊಸೈಟಿ ಮುಂಭಾಗದ ರಸ್ತೆಯಲ್ಲಿ ಗುರುವಾರ ಮಧ್ಯ ರಾತ್ರಿ ಅರಸೀಕೆರೆ ಗ್ರಾಮಾಂತರ ಸಿಪಿಐ ಗಂಗಾಧರಪ್ಪ ಮತ್ತು ಸಿಬ್ಬಂದಿ ಖಚಿತ ಮಾಹಿತಿ ಮೇರೆಗೆ ಗೇರುಮರ ಗೇಟ್‌ಕಡೆಯಿಂದ ದೇಶಾಣಿ ಕಡೆಗೆ ಬರುತ್ತಿದ್ದ ಟಾಟಾ ಸುಮೋ ವಾಹನದಲ್ಲಿ ಮದ್ಯಸಾಗಿಸುತ್ತಿರುವುದು ಕಂಡು ಬಂದಿತು. ಚಾಲಕ  ಸುರೇಶ್ ಹಾಗೂ ನವೀನ್ ಪರವಾವಗಿ ಇಲ್ಲದ ಮದ್ಯ ಸಾಗಿಸುತ್ತಿರುವುದನ್ನು ಪೊಲೀಸರು ಪತ್ತೆಹಚ್ಚಿ ಇಬ್ಬರನ್ನೂ ಬಂಧಿಸಿದ್ದಾರೆ. ಅಲ್ಲದೆ  5376 ರು. ಮೌಲ್ಯದ  ಮದ್ಯ ಹಾಗೂ ಟಾಟಾ ಸುಮೋ ವಶಪಡಿಸಿ ಕೊಂಡಿದ್ದಾರೆ.ಈ ಬಗ್ಗೆ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement