ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎನ್ನೆಸ್ಸೆಸ್ ಶಿಬಿರದಲ್ಲಿ ಯೋಗ, ಪ್ರಾಣಾಯಾಮ ಕುರಿತು ಮಾಹಿತಿ

Parashurama
Updated On : 17 Feb 2013, 11:43 am

ಹಾಸನ: ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ತಾಲೂಕಿನ ಕಟ್ಟಾಯ ಹೋಬಳಿಯ ಚನ್ನಂಗಿಹಳ್ಳಿಯಲ್ಲಿ ಏರ್ಪಡಿಸಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ  ವ್ಯಕ್ತಿತ್ವ ವಿಕಾಸ ಕೇಂದ್ರದ  ಸುರೇಶ ಗುರೂಜಿ ಅವರಿಂದ ಯೋಗ ಮತ್ತು ಪ್ರಾಣಾಯಾಮ ಎಂಬ ವಿಷಯ ಕುರಿತು ಮಾಹಿತಿ ನೀಡಲಾಯಿತು.
ಮನುಷ್ಯನ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಲು ಅಗತ್ಯವಾದ ಅಷ್ಟಾಂಗ ಯೋಗದ ಪರಿಚಯವನ್ನು  ಗುರೂಜಿ ಮಾಡಿಕೊಟ್ಟರು. ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ಮುಖ್ಯ ಪಾತ್ರವಹಿಸುವ ಪಂಚಕೋಶಗಳ ಪರಿಚಯವನ್ನು ಉದಾಹರಣೆ ಸಹಿತ ಮಾಡಿಕೊಟ್ಟರು.
ಸುಜಲಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕುಮಾರ್, ಶಿಬಿರಗಳು ಗ್ರಾಮಸ್ಥರಿಗೂ ಹಾಗೂ ಕಾಲೇಜಿಗೂ ಸಂಬಂಧವನ್ನು ಕಲ್ಪಿಸುವ ಸೇತುವೆಯಂತಿದ್ದು ಕಾಲೇಜಿನವರು ಈ ಏಳು ದಿನ ಮಾತ್ರವಲ್ಲದೆ ಮುಂದೆಯೂ ಗ್ರಾಮದವರ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಗ್ರಾಮಸ್ಥರ ಅಭಿವೃದ್ಧಿಗೆ ಕಾರಣವಾಗ ಬೇಕೆಂದು ತಿಳಿಸಿದರು. ಮೋಹನ್ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು. ನಳಿನಾ ನಿರೂಪಿಸಿದರು.                                

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement