ಮೂಲಬೇರು ಜನಪದ ಸಂಸ್ಕೃತಿಯನ್ನೇ ಮರೆತಿದ್ದೇವೆ
ಹಾಸನ: ನಮ್ಮ ಸಂಸ್ಕೃತಿಯ ಮೂಲ ಬೇರಾದ ಜನಪದ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂದು ಜನಪದ ವಿದ್ವಾಂಸ, ರಂಗಕರ್ಮಿ ಚಂದ್ರು ಕಾಳೇನಹಳ್ಳಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಹಾಸನಾಂಬ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ಹನುಮೇಗೌಡ ಪುರುಷೋತ್ತಮ ಸ್ಮಾರಕ ದತ್ತಿ ಉಪನ್ಯಾಸ ನೀಡಿ ಮಾತ ನಾಡುತ್ತಿದ್ದರು.
ಜನಪದ ಕಥೆಗಳು, ಹಾಡುಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಲೆಯನ್ನು ಜನಪದರು ಅರಿತಿದ್ದರು. ಇಂದು ಮಾನವನ ಅಮಾನವೀಯ ವರ್ತನೆ, ಅತಿಯಾಸೆ ಜೊತೆಗೆ ಮಾನವೀಯ ಮೌಲ್ಯಗಳನ್ನು ಮರೆಯುತ್ತಿರುವುದು ಕಾರಣವಾಗಿದೆ ಎಂದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಗೊರೂರು ಶಿವೇಶ್, ಪಾಶ್ಚಾತ್ಯ ಸಂಸ್ಕೃತಿ ನಮ್ಮ ಅಡುಗೆ ಮನೆಯನ್ನು ಪ್ರವೇಶಿಸಿದ ಕಾರಣ ಕೋಡುಬಳೆ, ಚಕ್ಕುಲಿಯಂಥ ತಿಂಡಿಗಳ ಸ್ಥಾನದಲ್ಲಿ ಪಿಜಾಬರ್ಗರ್‌ಗಳು ಆಕ್ರಮಿಸುತ್ತಿವೆ ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಸಾಪ ಉಪಾಧ್ಯಕ್ಷ, ತಾಯಿ ತಂದೆ, ಗಂಡ ಹೆಂಡತಿ ಹೀಗೆ ಹಲವಾರು ರೀತಿಯಲ್ಲಿ ಬಾಂಧವ್ಯ ಬೆಸೆಯುತ್ತಿದ್ದ ಜನಪದ ಸಂಸ್ಕೃತಿಯನ್ನು ಮರೆತ ಕಾರಣ ಇಂದಿನ ಸಂಸಾರ ವಿಭಜನೆಗೆ ಮೂಲ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಾಸನಾಂಬ ಶಿಕ್ಷಣ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗೀತಾ ಎಸ್. ಅಧ್ಯಕ್ಷತೆ ವಹಿಸಿದ್ದರು. ಬಾಬು ಜನಪದಗೀತೆ ಹಾಡಿದರು.
ಶಿಕ್ಷಕ ಅಣ್ಣಪ್ಪಶೆಟ್ಟಿ ಮತ್ತು ಸುದರ್ಶನ್, ಉಪನ್ಯಾಸಕ ಎಂ.ಬಿ. ಪುಟ್ಟಣ್ಣಶೆಟ್ಟಿ, ಎಚ್.ಎಲ್. ಪ್ರಕಾಶ್, ಶ್ರೀನಿವಾಸ್ ಹಾಜರಿದ್ದರು. ನಂದಿನಿ ನಿರೂಪಿಸಿದರು. ಉಷಾ ವಂದಿಸಿದರು.