ಹಾಸನ

ಸದೃಢ ಭಾರತ:ಸಾಕ್ಷ್ಯಚಿತ್ರ ಪ್ರದರ್ಶನ

ಹೊಳೆನರಸೀಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರಾ ಕೂಟ ಹಾಗೂ ರಾಷ್ಟ್ರಗೌರವ ಸಂರಕ್ಷಣಾ ಪರಿಷತ್ತಿನ ಆಶ್ರಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ದೇಶ ಭಕ್ತಿ ಮತ್ತು ಭವಿಷ್ಯದಲ್ಲಿ ಸದೃಢ ಭಾರತವನ್ನು ಕಟ್ಟಬಲ್ಲ ಚಿಂತನೆಗೆ ಪೂರಕಕಾರ್ಯಕ್ರಮ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ಈಚೆಗೆ ನಡೆಯಿತು.
 ರಾಷ್ಟ್ರಗೌರವ ಸಂರಕ್ಷಣಾ ಪರಿಷತ್ತಿನ ಅಧ್ಯಕ್ಷ ಹಾಗೂ ಸಂಚಾಲಕರಾದ ಟಿ.ಎನ್.ರಾಮಕೃಷ್ಣ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶಭಕ್ತ ಮದನಮೋಹನ ಮಾಳವೀಯ ಹೋರಾಟ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಅಧ್ಯಕ್ಷ ಟಿ.ಎನ್.ರಾಮಕೃಷ್ಣ ಮಾತನಾಡಿ, ತಿಲಕ್ ಸುಭಾಷ್‌ಚಂದ್ರ ಭೋಸರು, ಲಾಲಾ ಲಜಪತರಾಯ್, ಭಗತ್‌ಸಿಂಗ್, ವೀರ ಸಾವರ್ಕರ್‌ರಂತಹವರು ನಮ್ಮ ಯುವ ಸಮುದಾಯದ ಆದರ್ಶಗಳಾಗ ಬೇಕಿದೆ. ಭವ್ಯ ಭಾರತದನಿರ್ಮಾಣಕ್ಕೆ ಪಣತೊಡುವಂತೆಅವರು ಕರೆ ನೀಡಿದರು.
  ಪ್ರಾಧ್ಯಾಪಕ ಎಚ್.ವಿ.ನಯನತಾರಾಮಣಿ, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಕಿರಣ್‌ರಾವತ್, ವ್ಯವಸ್ಥಾಪಕ  ಪುಟ್ಟರಾಜು ಇದ್ದರು. ಪ್ರಾಧ್ಯಾಪಕಿ ಪ್ರೊ. ಶಾಂತ ನಿರೂಪಿಸಿದರು. ಪ್ರೊ. ರಾಮೇಗೌಡ ಸ್ವಾಗತಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!