97ರ ಅಧಿನಿಯಮ ಕುರಿತ ತರಬೇತಿ ಶಿಬಿರ ಉದ್ಘಾಟನೆ
ಹಾಸನ: ಸಹಕಾರ ಸಂಘಗಳು ಉತ್ತಮ ಮಟ್ಟದಲ್ಲಿ ಬೆಳೆಯಬೇಕಾದರೆ ಈ ಸಂಘಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯದರ್ಶಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಂಕರ್ ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ಸಹಕಾರ ಭವನದಲ್ಲಿ ನಡೆದ ಸಂವಿಧಾನ ತಿದ್ದುಪಡಿ 97ರ ಅಧಿನಿಯಮ ಕುರಿತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳ ಅಭಿವೃದ್ಧಿಗೆ ಆಡಳಿತ ಮಂಡಳಿ ಮತ್ತು ಸಿಬ್ಬಂದಿವರ್ಗದವರ ಪಾತ್ರ ಅತಿ ಮುಖ್ಯ. ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಬ್ಯಾಂಕಿನಿಂದ ದೊರೆಯುತ್ತಿರುವ ಸೌಲಭ್ಯಗಳು ನೇರವಾಗಿ ರೈತರಿಗೆ ದೊರಕುವಂತೆ ಮಾಡಬೇಕು ಎಂದರು.
ನಬಾರ್ಡ್ನಿಂದ ರೂಪಾಯೈ ಕಾರ್ಡ್ ಬಿಡುಗಡೆ: ನಬಾರ್ಡ್ನಿಂದ ರೂಪಾಯೈ ಎಂಬ ಕಾರ್ಡ್ ಬಿಡುಗಡೆ ಮಾಡುತ್ತಿದ್ದು, ಪ್ರತಿ ರೈತರಿಗೆ ಉಚಿತವಾಗಿ ವಿತರಿಸಲು ತಿಳಿಸಿ ಕ್ರೆಡಿಟ್ ಕಾರ್ಡ್ ರೀತಿಯಲ್ಲಿ ರೈತರು ಈ ರೂಪಾಯೈ ಕಾರ್ಡ್ ಮೂಲಕ ಹಣಕಾಸಿನ ವ್ಯವಹಾರ ಮಾಡಬಹುದಾಗಿದೆ. ಹೊಸ ಹೊಸ ತಿದ್ದುಪಡಿಗೆ ಅನುಗುಣವಾಗಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತಮ್ಮ ಕೆಲಸಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುವುದರೊಂದಿಗೆ ಸಂಘವನ್ನು ಮುನ್ನೆಡಿಸಿ ಕೊಂಡು ಹೋಗಬೇಕು ಎಂದರು. ಮುಖ್ಯ ಅತಿಥಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪನಿರ್ದೇಶಕ ರವೀಂದ್ರ ಪಾಟೀಲ್ ಮಾತನಾಡಿದರು. ಎಂ.ಕೃಷ್ಣ ಲಾ ಕಾಲೇಜು ಸಂವಿಧಾನ ತಿದ್ದುಪಡಿ 97ನೇ ಅಧಿನಿಯಮ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಶಂಕರ್ ಸಂಘಗಳಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳು, ಸಹಾಯಕ ನಿಬಂಧಕ ನಂಜುಡೇಗೌಡ ಉಪನ್ಯಾಸ ನೀಡಿದರು.