'ಅನಧಿಕೃತ ಶಾಲೆಗಳಿಗೆ ಮಕ್ಕಳನ್ನು ದಾಖಲಿಸ ಬೇಡಿ'
ಸಕಲೇಶಪುರ: ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೆ ಪೂರ್ವ ಪ್ರಾಥಮಿಕ ಮತ್ತು 6 ಮತ್ತು7ನೇ ತರಗತಿಗಳನ್ನು ಅನಧಿಕೃತವಾಗಿ ನಡೆಸುತ್ತಿದ್ದು, ಇದು ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿದೆ.
ಆದ ಕಾರಣ ಪೋಷಕರು ಈ ಶಾಲೆಗಳಿಗೆ 2013-14ನೇ ಸಾಲಿನಲ್ಲಿ ತಮ್ಮ ಮಕ್ಕಳನ್ನು ದಾಖಲಿಸ ಬಾರದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ದಾಖಲಿಸಿದಲ್ಲಿ ಮುಂದಿನ ಆಗು ಹೋಗುಗಳಿಗೆ ಪೋಷಕರೇ ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಅನಧಿಕೃತ ಶಾಲೆಗಳ ವಿವರ ಇಂತಿದೆ - ಪೂರ್ವ ಪ್ರಾಥಮಿಕ ವಿಭಾಗ ನಡೆಸುತ್ತಿರುವ ಶಾಲೆಗಳು ವಿವೇಕ ವರ್ಧಿನಿ ಶಾಲೆ ಹೆತ್ತೂರು, ಸಂತ್ ಜೋಸೆಫ್ರ ಶಾಲೆ ಸಕಲೇಶಪುರ, ಹೇಮಾವತಿ ಕಾನ್ವೆಂಟ್ ಹಚ್ಚಂಗಡಿಹಳ್ಳಿ, ಇಂಡಿಯನ್ ಕಾನ್ವೆಂಟ್ ಶಾಲೆ ಹಾನುಬಾಳು, ಶಾರದಾ ವಿದ್ಯಾನಿಕೇತನ ಸಕಲೇಶಪುರ. 6 ಮತ್ತು 7ನೇ ತರಗತಿ ನಡೆಸುತ್ತಿರುವ ಶಾಲೆಗಳು ಬ್ಲಾಸಂ ಕಿರಿಯ ಪ್ರಾಥಮಿಕ ಶಾಲೆ ಬಾಳ್ಳುಪೇಟೆ ವಿನಾಯಕ ಕಿರಿಯ ಪ್ರಾಥಮಿಕ ಶಾಲೆ ಮರಗತ್ತೂರು, ಸೇಂಟ್ ಆಗ್ನೇಸ್ ಕಿರಿಯ ಪ್ರಾಥಮಿಕ ಶಾಲೆ ಸಕಲೇಶಪುರ.