ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ಗಾಂಧಿ ತತ್ವ ಪ್ರೇರಣಾ ಶಿಬಿರ

Parashurama
Updated On : 24 Feb 2013, 9:48 am

ಹಾಸನ: ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅರಸೀಕೆರೆ ತಾಲೂಕಿನ ಕಸ್ತೂರಬಾ ಗ್ರಾಮದಲ್ಲಿ ಫೆ. 25 ರಂದು ಸಂಜೆ 4 ಗಂಟೆಗೆ ತತ್ವ ಪ್ರೇರಣಾ ಶಿಬಿರ ಏರ್ಪಡಿಸಿದೆ. ಗಾಂಧಿ ತತ್ವ ಪ್ರಣೀತ ಯುವ ಪ್ರೇರಣಾ ಶಿಬಿರ ಮತ್ತು ಯಶೋಧರಮ್ಮ ದಾಸಪ್ಪ ಸ್ಮರಣೆ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ  ಡಾ.ಕೆ.ಎಸ್.ರಂಗಪ್ಪ ಹಾಗೂ ವಿವಿಧ ಗಣ್ಯರು ಭಾಗವಹಿಸುವರು.
ಆಕ್ಷೇಪಣೆ ಸಲ್ಲಿಸಲು ಮಾ.3 ಕೊನೆ ದಿನ
ಹಾಸನ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹಶಿಕ್ಷಕರು ಗ್ರೇಡ್-2 ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್- 1 ಹುದ್ದೆಗೆ ಬಡ್ತಿ ನೀಡಲು ಜಿಲ್ಲಾ ಮಟ್ಟದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಆಕ್ಷೇಪಣೆಗಳಿದ್ದರೆ ಅಂತಹ ಆಕ್ಷೇಪಣೆ ಗಳನ್ನು  ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮಾ.5 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲು ತಿಳಿಸಿದೆ. ನಂತರ ಬಂದ ಯಾವುದೇ ಆಕ್ಷೇಪಣೆ ಸ್ವೀಕರಿಸಲಾಗುವುದಿಲ್ಲ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕರು  ತಿಳಿಸಿದ್ದಾರೆ.
27ಕ್ಕೆ ಬ್ಯಾಂಕ್ ಅದಾಲತ್
ಹಾಸನ: ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಿಂದ ಫೆ 27 ರಂದು ಬೆಳಗ್ಗೆ 10 ಕ್ಕೆ  ಬ್ಯಾಂಕ್ ಅದಾಲತ್ ಆಯೋಜಿಸಲಾಗಿದೆ. ರೈತರು ಮತ್ತು ಇತರೆ ಸಾಲಗಾರರ ಸುಸ್ತಿ ಸಾಲ ಒಮ್ಮೆಯೇ ತೀರ್ವಳಿ ಮಾಡಿಕೊಳ್ಳುವ ಅವಕಾಶ ಒದಗಿಸಲಾಗುವುದು. ಕೋರ್ಟಿನಲ್ಲಿ ದಾವಾ ಇರುವ ರೈತರು ಸಹ ಭಾಗವಹಿಸಬಹುದು. ಇತ್ಯರ್ಥವಾದಲ್ಲಿ ದಾವೆ ಹಿಂಪಡೆಯಲಾಗುವುದು. ಅದಾಲತ್‌ನಲ್ಲಿ ಸಾಲಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಟ್ರ್ಯಾಕ್ಟರ್ ಸಾಲ ಮರುಪಾವತಿ ಮಾಡುವವರಿಗೆ ಅಧಿಕ ರಿಯಾಯ್ತಿ ಕೊಡಲಾಗುವುದು ಎಂದು ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.
ಉಪಾಧ್ಯಕ್ಷರಾಗಿ ಸತೀಶ್  ನೇಮಕ
ಹಾಸನ: ಜೆಡಿಎಸ್ ರಾಜ್ಯ ಉಪಾಧ್ಯಕ್ಷರನ್ನಾಗಿ  ಅರಕಲಗೂಡು ತಾಲೂಕು ಹೊನ್ನವಳ್ಳಿಯ ಕೆ.ಸತೀಶ್ ಅವರನ್ನು  ನೇಮಕ ಮಾಡಲಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement